ಗದಗ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಯತ್ನ, ಇಬ್ಬರ ಸಾವು

Sep 29, 2021, 11:06 AM IST

ಗದಗ(ಸೆ. 29): ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ 8 ವರ್ಷದ ಹೆಣ್ಣುಮಗು ಹಾಗೂ ತಾಯಿ ಉಮಾದೇವಿ(45) ಮೃತಪಟ್ಟಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು ಇನ್ನಿಬ್ಬರ ಮಕ್ಕಳು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 12 ಮತ್ತು 14 ವರ್ಷದ ಇಬ್ಬರು ಸಾವಿನ ದವಡೆಯಿಂದ ಬಚಾವ್‌ ಆಗಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೇ ಉಮಾದೇವಿ ಅವರ ಪತಿ ಕೊರೋನಾದಿಂದ ಮೃತಪಟ್ಟಿದ್ದರು.

ಬೀದರ್‌: ಛಲ ಬಿಡದೆ ಸವಾಲು ಸ್ವೀಕರಿಸಿದ ಸಚಿವ ಪ್ರಭು ಚವ್ಹಾಣ್‌