ಹಿಂದೂ-ಮುಸ್ಲಿಂ ಹುಡುಗ ಹುಡುಗಿಯರೇ ಹುಷಾರ್, ಎಗ್ಗಿಲ್ಲದೆ ನಡೀತಿದೆ ನೈತಿಕ ಪೊಲೀಸ್‌ಗಿರಿ..!

ಹಿಂದೂ-ಮುಸ್ಲಿಂ ಹುಡುಗ ಹುಡುಗಿಯರೇ ಹುಷಾರ್, ಎಗ್ಗಿಲ್ಲದೆ ನಡೀತಿದೆ ನೈತಿಕ ಪೊಲೀಸ್‌ಗಿರಿ..!

Published : Jan 11, 2024, 11:12 AM IST

ಕಿರಾತಕ ಕೃತ್ಯಗಳನ್ನ ಇಂತವರಿಂದಲೇ ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಹದಗೆಡುತ್ತಿರೋದು. ಇನ್ನೂ ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಯಾಕೋ ಮೌನವಹಿರೋದು ನಿಜಕ್ಕೂ ದುರಂತ. ಸರ್ಕಾರ ಇಂತವರ ಹೆಡೆಮುರಿ ಕಟ್ಟಬೇಕಿದೆ. ಸಮಾಜದಲ್ಲಿ ಶಾಂತಿ ನೆಲಸುವಂತಹ ಕ್ರಮಕೈಗೊಳ್ಳಬೇಕಿದೆ. 

ಬೆಳಗಾವಿ(ಜ.11):  ಇತ್ತೀಚೆಗೆ ಧರ್ಮ ಧರ್ಮಗಳ ನಡುವಿನ ಹೊಡೆದಾಟ, ಬಡಿದಾಟ ಹೆಚ್ಚಾಗಿದೆ. ಅದರಲ್ಲೂ ಕೆಲವರಂತೂ ಒಂದು ಹಿಂದು ಮುಸ್ಲಿಂ ಹುಡುಗ ಹುಡುಗಿ ಒಟ್ಟಿಗೆ ನೋಡಿದ್ರೆ ಮುಗೀತು. ತಮ್ಮ ಪೌರುಷವನ್ನ ತೋರಿಸಿಯೇ ಬಿಡ್ತಾರೆ. ಫ್ರೆಂಡ್ಸ್ ಅಂದ್ರೂ ಬಿಡಲ್ಲ, ಅಣ್ಣ ತಂಗಿ ಅಂದ್ರೂ ಬಿಡಲ್ಲ. ಅದರಲ್ಲೂ ಇತ್ತೀಚೆಗಂತೂ ಈ ನೈತಿಕ ಪೊಲೀಸ್‌ಗಿರಿ ಎಗ್ಗಿಲ್ಲದೆ ನಡೆಯುತ್ತಿದೆ. ಹೀಗೆ ಹಿಂದು ಮುಸ್ಲಿಂ ಯುವಕ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಕೂತಿರುವ ಕೆಲ ಗ್ಯಾಂಗ್‌ಗಳ ಆಟೋಟಪದ ಪ್ರದರ್ಶನವೇ ಇವತ್ತಿನ ಎಫ್ಐಆರ್.

ತಮ್ಮ ಪಾಡಿಗೆ ಬಂದು ಹೋಗುತ್ತಿದ್ದವರ ಮೇಲೆ ಪುಂಡರು ತಮ್ಮ ಪೌರುಷ ತೋರಿಸಿದ್ದಾರೆ. ಆದ್ರೆ ಇದೇ ಮೊದಲೇನೂ ಅಲ್ಲ. ಮೊನ್ನೆಯಷ್ಟೇ ಬೆಳಗಾವಿ ಮತ್ತು ಚಿಕ್ಕಮಗಳೂರಿನಲ್ಲೂ ಇಂಥದ್ದೇ ಘಟನೆ ನಡೆದಿದೆ. ಪುಂಡರು ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದಾರೆ.

ಡಿಸಿಎಂ ದಂಗಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ದಾಯಾದಿ ಯುದ್ಧ, "ಲಕ್ಷ್ಮೀ" ಪಟಾಕಿ, ಸೀಕ್ರೆಟ್ ಆಪರೇಷನ್..!

ಈ ಕಿರಾತಕರು ಫ್ರೆಂಡ್ಸ್ ಅಂದ್ರೂ ಬಿಡಲ್ಲ ಅಕ್ಕ ತಮ್ಮ ಅಂದ್ರೂ ಬಿಡಲ್ಲ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ... ಅವರಿಬ್ಬರೂ ಸಂಬಂಧದಲ್ಲಿ ಅಕ್ಕ-ತಮ್ಮ. ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ತಮ್ಮೂರಿನಿಂದ ಬೆಳಗಾವಿಗೆ ಬಂದಿದ್ದರು. ಬಂದ ಕೆಲಸ ತಡವಾದ ಕಾರಣ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದರು. ಈ ಜೋಡಿಯನ್ನ ಗಮನಿಸಿದ ಗುಂಪೊಂದು ದಿಢೀರ್ ಅಟ್ಯಾಕ್ ಮಾಡಿದೆ. ಅಷ್ಟೇ ಅಲ್ಲ ಶೆಡ್ ಒಳಗೆ ಎಳೆದೊಯ್ದು ಯುವಕ-ಯುವತಿ ಮೇಲೆ ಹಲ್ಲೆ ಮಾಡಿದೆ.

ಕಿರಾತಕ ಕೃತ್ಯಗಳನ್ನ ಇಂತವರಿಂದಲೇ ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಹದಗೆಡುತ್ತಿರೋದು. ಇನ್ನೂ ಇಂತಹ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಯಾಕೋ ಮೌನವಹಿರೋದು ನಿಜಕ್ಕೂ ದುರಂತ. ಸರ್ಕಾರ ಇಂತವರ ಹೆಡೆಮುರಿ ಕಟ್ಟಬೇಕಿದೆ. ಸಮಾಜದಲ್ಲಿ ಶಾಂತಿ ನೆಲಸುವಂತಹ ಕ್ರಮಕೈಗೊಳ್ಳಬೇಕಿದೆ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!