
ರೀಲ್ಸ್‌ನಲ್ಲಿ ಪರಿಚಯವಾಗಿ ಮದುವೆಯೂ ಆದ ಬಳಿಕ ಯುವಕನೋರ್ವ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಪತ್ನಿಯೊಬ್ಬಳು ಠಾಣೆ ಮೆಟ್ಟಿಲೇರಿದ್ದಾಳೆ.
ಆತ KSRTC ಬಸ್ ಡ್ರೈವರ್.. ಬೆಂಗಳೂರು ಟೂ ಮೈಸೂರು ಅವನ ರೂಟ್. ಆದ್ರೆ ಟೈಂ ಸಿಕ್ಕಾಗಲೆಲ್ಲಾ ಆತ ರೀಲ್ಸ್‌ನಲ್ಲಿ ಬ್ಯುಸಿ.. ಆದ್ರೆ ರೀಲ್ಸ್ ತಿರುವಾಕುವಾಗ್ಲೇ ಅವನಿಗೆ ಅವಳೊಬ್ಬಳ ವಿಡಿಯೋಗಳು ಇಷ್ಟವಾಗಿಬಿಟ್ಟಿವೆ.. ತಡಮಾಡದೇ ಡಿಎಂ ಮಾಡಿದ್ದಾನೆ ಅಷ್ಟೇ.. ಆತ್ತಕಡೆಯಿಂದ ಆಕೆಯೂ ಮೆಸೇಜ್ ಮಾಡಿದ್ದಾಳೆ... ಇಬ್ಬರಿಗೂ ರೀಲ್ಸ್ನಲ್ಲೇ ಪರಿಚಯವಾಗಿ ಕೊನೆಗೂ ಪ್ರೇಮಿಗಳಾಗಿದ್ದಾರೆ.. ಊರೂರು ಸುತ್ತಿದ್ದಾರೆ.. 2 ವರ್ಷ ಲವ್ ಮಾಡಿ ಕೊನೆಗೂ ಮದುವೆಯಾಗಿದ್ದಾರೆ.. ಆದ್ರೆ ಮದುವೆಯಾಗಿ ಒಂದು ವರ್ಷವಾಗಿಲ್ಲ.. ಇವತ್ತು ಆ ಹೆಣ್ಣುಮಗಳು ಗಂಡನನ್ನ ಹುಡುಕಿಕೊಡಿ ಅಂತ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಾಳೆ.. ತಾನು ಪ್ರೀತಿಸಿದವನನ್ನ ಹುಡುಕಿಕೊಂಡು ಊರೂರು ಸುತ್ತುತ್ತಿದ್ದಾಳೆ .. ಅಷ್ಟಕ್ಕೂ ಆಕೆಯನ್ನ ಪ್ರೀತಿಸಿದ ಹುಡುಗ ಎಲ್ಲಿಗೆ ಹೋದ..? ಏನಾಯ್ತು ಒಂದು ವರ್ಷದ ಮದುವೆಯ ಬದುಕಿನಲ್ಲಿ.. ವಾರೆಂಟಿ ಇಲ್ಲದ ರೀಲ್ಸ್ ಲವ್ನ ಕಂಪ್ಲೀಟ್ ಕಥೆಯೇ ಇವತ್ತಿನ ಎಫ್.ಐ.ಆರ್.
ಮತ್ತೊಂದು ಪ್ರಕರಣದಲ್ಲಿ ಆಕೆ ವಿವಾಹಿತ ಮಹಿಳೆ.. ಎಂದಿನಂತೆ ಮನೆ ಕೆಲಸ ಮುಗಿಸಿ, ತನ್ನ ಮಕ್ಕಳನ್ನು ಶಾಲೆಗೆ ಬಿಟ್ಟು, ಕೆಲಸಕ್ಕೆ ಹೊರಟ್ಟಿದ್ಳು.. ಆದ್ರೆ ಆಕೆಯನ್ನೇ ಹಿಂಬಾಲಿಸುತ್ತಾ ಬಂದಿದ್ದ ಆಗಂತುಕರು, ಕ್ಷಣಾರ್ಧದಲ್ಲೇ ಆಕೆಯ ಕೊಂದು ಎಸ್ಕೇಪ್ ಆಗಿದ್ದಾರೆ. ಇನ್ನೂ ತನಿಖೆ ನಡೆಸಿದ ಪೊಲೀಸರು ಅದೇ ರಸ್ತೆಯಲ್ಲಿದ್ದ ಸಿಸಿ ಕ್ಯಾಮರಾವನ್ನ ಪರೀಸೀಲಿಸುತ್ತಾರೆ.. ಆಗಲೇ ನೋಡಿ ಕೊಲೆಗಾರ ಯಾರು ಅಂತ ಗೊತ್ತಾಗೋದು.. ಅಂದಹಾಗೆ ಆ ಮಹಿಳೆಯನ್ನ ಕೊಂದಿದ್ಯಾರು ಗೊತ್ತಾ..? ಆಕೆಯ ಗಂಡ.
ಇವತ್ತಲ್ಲಾ ನಾಳೆ ವೆಂಕಟೇಶ ಸಿಕ್ಕೇ ಸಿಗ್ತಾನೆ.. ಅದ್ರೆ ಜೊತೆಯಲ್ಲಿದ್ದಾಗ ನೆಟ್ಟಗೆ ಬಾಳಿಸಲಾಗದೇ.. ತನ್ನ ಪಾಡಿಗೆ ಕೆಲಸ ಮಕ್ಕಳು ಅಂತಿದ್ದ ರೂಪಾಳನ್ನ ಕೊಂದ ಆ ಕಿರಾತಕನಿಗೆ ತಕ್ಕ ಶಿಕ್ಷೆಯಾಗಲೇಬೇಕು ಅಂತ ಒತ್ತಾಯಿಸ್ತಿದ್ದಾರೆ ಸ್ಥಳೀಯರು.