Oct 12, 2023, 11:12 AM IST
ರೈತ ಅಂದ್ರೆ ಮುಗ್ದ..ಯಾರಿಗೂ ಕೇಡನ್ನ ಬಯಸದ ವ್ಯಕ್ತಿತ್ವ..ಆದ್ರೆ ಕಷ್ಟಪಟ್ಟು ದುಡಿಯುವ ಅನ್ನದಾತನಿಗೆ ಮಾಲೀಕನೊರ್ವ ಕೋಟಿ ಕೋಟಿ ಪಂಗನಾಮ ಹಾಕಿದ್ದಾನೆ. ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ವಿಶ್ವರಾಧ್ಯ ಟ್ರೇಡರ್ಸ್ ಮಾಲೀಕ ಮಾರುತಿ ಬಲಕಲ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ. ತನ್ನ ಬಣ್ಣದ ಮಾತಿನಿಂದ ರೈತರಿಗೆ(Farmers) ಹಣವಿಲ್ಲದ ಖಾತೆಯ ಚೆಕ್ ನೀಡಿ ಪರಾರಿಯಾಗಿದ್ದಾನೆ. ರಾಮಸಮುದ್ರ ಗ್ರಾಮದ ಮಾರುತಿ ಬಲಕಲ್ ಎಂಬ ವ್ಯಕ್ತಿ 2022ರಲ್ಲಿ ಹಲವು ರೈತರಿಂದ ಹತ್ತಿ ಖರೀದಿ ಮಾಡಿದ್ದ.. ಸೂಕ್ತ ಸಮಯಕ್ಕೆ ಹಣವನ್ನು ನೀಡಿದ್ದ. ಇದನ್ನೇ ನಂಬಿದ ಅನ್ನದಾತರು ಮಾರುತಿ ಅಂದ್ರೆ ಸಕಾಲಕ್ಕೆ ಹಣ(money) ನೀಡುವ ನಂಬಿಕೆಗೆ ಅರ್ಹ ಅಂತಾ ಅಂದುಕೊಂಡಿದ್ರು. ಅದೇ ಕಾರಣಕ್ಕೆ ಈ ಬಾರಿಯೂ ಆತನಿಗೆ ಹತ್ತಿ ಮಾರಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹತ್ತಿ ಕ್ವಿಂಟಾಲ್‌ಗೆ 8ರಿಂದ 9ಸಾವಿರ ರೇಟ್ ಇತ್ತು.. ಆಗ ಮಾರುತಿ 150ಕ್ಕೂ ಹೆಚ್ಚು ರೈತರಿಂದ ಹತ್ತಿ ಖರೀದಿಸಿದ್ದಾನೆ. ಹತ್ತಿ ಖರಿದಿ ಮಾಡುವಾಗ ಹಣ ನೀಡಿರಲಿಲ್ಲ. ಇವತ್ತಲ್ಲ ನಾಳೆ ದುಡ್ಡು ಕೊಡ್ತಾನೆ ಅಂತಾ ರೈತರು ಸುಮ್ನಿನಿದ್ರು..ಆದ್ರೆ ಅಸಾಮಿ ಹಣವನ್ನೇ ಕೊಡಲಿಲ್ಲ. ಆಗ ರೈತರು ಪೊಲೀಸರಿಗೆ ದೂರು ನೀಡಿದ್ರು. ಆ ಬಳಿಕ ಸೆಪ್ಟೆಂಬರ್‌ನಲ್ಲಿ ಚೆಕ್ ಕೊಟ್ಟಿದ್ದಾನೆ. ಆದ್ರೆ ಅಕೌಂಟ್‌ನಲ್ಲಿ ಹಣವಿಲ್ಲದ ಕಾರಣ ರೈತರಿಗೆ ಕೊಟ್ಟ ಚೆಕ್ ಬೌನ್ಸ್(Check Bounce) ಆಗಿದೆ. ಇತ್ತ ಮಾರುತಿ ಹುಡುಕೋಕೆ ಹೋದ್ರೆ ಆತ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಮಳೆ ಕೊರತೆ ನಡುವೆಯೂ ಒಂದಿಷ್ಟು ಒಳ್ಳೆ ಬೆಳೆ ಬಂದಿತ್ತು. ಭೂ ತಾಯಿ ಕೈ ಬಿಡಲಿಲ್ಲ ಎಂದು ಬಂದ ಒಳ್ಳೆ ಫಸಲನ್ನೆಲ್ಲಾ ಮಾರಿದ್ದಾರೆ. ಆದ್ರೆ ಈಗ ಬೆಳೆಯೂ ಇಲ್ಲ..ಹಣವೂ ಇಲ್ಲದ ಪರಿಸ್ಥಿತಿ ಯಾದಗಿರಿ ರೈತರದ್ದು. ಜಿಲ್ಲೆಯ ಹಾಲಗೇರಾ, ಜೀನಕೇರಾ, ತಾಂಡಾಗಳು, ಹಳಿಗೇರಾ, ಕುರಕುಂದ ಸೇರಿದಂತೆ ಅನೇಕ ಗ್ರಾಮದ ರೈತರ ಬಳಿ ಹತ್ತಿ ಖರೀದಿಸಿ 2.5 ಕೋಟಿಯಷ್ಟು ಮೋಸ ಮಾಡಿದ್ದಾನೆ.
ಇದನ್ನೂ ವೀಕ್ಷಿಸಿ: 7 ವಿವಿ ಕುಲಪತಿಗಳಿಗೆ 7 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ..! ಹೊಸ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ನಿರ್ಲಕ್ಷ್ಯವೇಕೆ..?