ರಕ್ತದ ಕಲೆ ಪತ್ತೆಗೆ ಲೂಮಿನಾರ್‌ ಟೆಸ್ಟ್‌ ! ಕಾರ್‌ ವಾಶಿಂಗ್‌ಗೆ ಕೊಟ್ಟಾಗ ಕುರಿ ರಕ್ತ ಎಂದಿದ್ದ ಹಂತಕರು!

Jun 17, 2024, 10:04 AM IST

ರಾಜ್ಯದೆಲ್ಲೆಡೆ ಈ ಕಿಲ್ಲಿಂಗ್​ ಸ್ಟಾರ್‌​ನದ್ದೇ ಸುದ್ದಿ. ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್(Darshan)​ ಕೊಲೆ ಕೇಸ್‌​ನಲ್ಲಿ ಅಂದರ್​ ಆಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ(Renukaswamy murder case) ಸಂಬಂದಿಸಿದಂತೆ ನಟ ದರ್ಶನ್,​ ಪವಿತ್ರಗೌಡ ಸೇರಿ 18 ಜನ ಅರೆಸ್ಟ್​ ಆಗಿದ್ದಾರೆ. ತನಿಖೆ ಚುರುಕುಗೊಂಡಿದ್ದು ಸದ್ಯ ಪೊಲೀಸರು ಸಾಕ್ಷ್ಯ ಕಲೆಹಾಕ್ತಿದ್ದಾರೆ. ಅಲ್ಲದೇ ರೇಣುಕಾಸ್ವಾಮಿಯನ್ನು ದರ್ಶನ್‌ ಗ್ಯಾಂಗ್‌ ಚಿತ್ರಹಿಂಸೆ ನೀಡಿ ಕೊಂದಿದೆ ಎನ್ನಲಾಗ್ತಿದೆ. ಸದ್ಯ ಆರೋಪಿಗಳನ್ನು ಐದು ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಕರೆಂಟ್ ಶಾಕ್‌ ಕೊಟ್ಟು ಟಾರ್ಚರ್‌ ನೀಡಿದ್ದಾರೆ ಎಂಬ ಮಾಹಿತಿ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ವೀಕ್ಷಿಸಿ:  'ಆಕೆ ನನ್ನ ಅತ್ತಿಗೆ ಅಲ್ಲ..ನನ್ನ ಅಮ್ಮ'..ಪವನ್‌ ಕಲ್ಯಾಣ್‌ ಅಚ್ಚರಿಯ ಗಿಫ್ಟ್ ನೀಡಿದ ಅತ್ತಿಗೆ!