'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!

'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!

Published : Jan 17, 2023, 08:49 PM IST

ಇದೊಂದು ಪಾಗಲ್‌ ಪ್ರೇಮಿಯ ಕಥೆ. ಬರೀ ಮೂರೇ ತಿಂಗಳ ಪ್ರೀತಿಗೆ ನೂರ್ಕಾಲ ಸುಂದರವಾಗಿ ಬದುಕುವ ಅವಕಾಶವನ್ನೇ ಕಳೆದುಕೊಂಡ ವ್ಯಥೆ. ಜಾತ್ರೆಗೆ ಹೋಗುವ ತಯಾರಿಯಲ್ಲಿದ್ದ ಹುಡುಗಿ ಕೊಲೆಯಾಗಿ ಹೋಗಿದ್ದಳು, ಅವಳ ಪಕ್ಕದಲ್ಲೇ ಬಾಯ್‌ಫ್ರೆಂಡ್‌ ಶವ ಕೂಡ ಸಿಕ್ಕಿತ್ತು.
 

ಕೊಪ್ಪಳ (ಜ.17): ಅವರಿನ್ನೂ ಸಾಮಾನ್ಯ ಲೋಕವನ್ನೇ ನೋಡಿರದವರು. ಆದರೆ, ಪ್ರೇಮಲೋಕದಲ್ಲಿ ವಿಹರಿಸುವ ಕನಸು ಕಂಡವರು. ಶಾಲೆ ಬಿಟ್ಟು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಅವರಿಬ್ಬರು ಪ್ರೇಮದ ಪಾಶಕ್ಕೆ ತಗುಲುಹಾಕಿಕೊಂಡಿದ್ದರು. ಆದರೆ, ಇವರ ಪ್ರೇಮದ ಆಯಸ್ಸು ಇದ್ದಿದ್ದು ಕೇವಲ 3 ತಿಂಗಳು ಮಾತ್ರ. 

ಲವ್‌ಅಲ್ಲಿ ಬಿದ್ದ ಮೂರೇ ತಿಂಗಳಿಗೆ ಅವರಿಬ್ಬರು ಹೆಣವಾಗಿ ಹೋಗಿದ್ದರು.  ಪ್ರೇಯಸಿಯ ಮನೆಯಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಸಾವು ಕಂಡಿದ್ದರು. ಮೇಲ್ನೋಟಕ್ಕೆ ಅದು ಕೊಲೆಯಂತೆ ಕಂಡಿದ್ದರಿಂದ  ಪೊಲೀಸರ ಎಂಟ್ರಿ ಕೂಡ ಆಗಿತ್ತು. ಅವರಿಬ್ಬರನ್ನ ಅಲ್ಲಿ ಯಾರೋ ಕೊಲೆ ಮಾಡಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ತನಿಖೆಗಿಳಿದಿದ್ದ ಪೊಲೀಸರು ಕೇಸ್‌ಗೆ ಬೇರೆಯದ್ದೇ ಟ್ವಿಸ್ಟ್ ಕೊಟ್ಟಿದ್ದರು. ಮಕರ ಸಂಕ್ರಮಣದ ದಿನ ಒಂದೇ ಮನೆಯಲ್ಲಿ ಸಿಕ್ಕ ಜೋಡಿ ಮೃತದೇಹಗಳ ಕೇಸ್‌ ಬಹಳ ಕುತೂಹಲಕಾರಿ.

Koppala: ಪ್ರೀತಿ ನೀರಾಕರಿಸಿದ ಮನೆಯವರು, ಕತ್ತು ಕೊಯ್ದುಕೊಂಡು ಪ್ರೇಮಿಗಳ ಆತ್ಮಹತ್ಯೆ

ಪಾಗಲ್‌ ಪ್ರೇಮಿ ಪ್ರಕಾಶ್‌ ಭಜಂತ್ರಿ, ಗೆಳತಿಯ ಮನೆಗೆ ಹೊಕ್ಕು ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಒಂದೇ ಏರಿಯಾದಲ್ಲಿ ಎದುರು-ಬದುರು ಮನೆಯವರು. ಕೆಲವು ಒನ್‌ ಸೈಡ್‌ ಲವ್‌ ಅಂದ್ರೆ ಇನ್ನೂ ಕೆಲವರು ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎಂದಿದ್ದಾರೆ. ಆದರೆ, ಇನ್ನೂ ಬಾಳಿ ಬದುಕಬೇಕಿದ್ದ ಜೀವಗಳಾಗಿತ್ತು. ಪ್ರಕಾಶ ಅವಳು ಸಿಗೋದಿಲ್ಲ ಅನ್ನೋ ಕಾರಣಕ್ಕೆ ಅವಳನ್ನ ಮುಗಿಸಿ ತಾನೂ ಚಾಕು ಹಾಕಿಕೊಂಡು ಸಾವು ಕಂಡಿದ್ದಾರೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more