ರಾಜ್ಯಗಳ ಗಡಿಮೀರಿ ಪ್ರೀತಿಸಿ ಮದುವೆಯಾದವರು, ಮೊದಲ ರಾತ್ರಿಗೂ ಮುನ್ನವೇ ಮಸಣ ಸೇರಿದರು!

ರಾಜ್ಯಗಳ ಗಡಿಮೀರಿ ಪ್ರೀತಿಸಿ ಮದುವೆಯಾದವರು, ಮೊದಲ ರಾತ್ರಿಗೂ ಮುನ್ನವೇ ಮಸಣ ಸೇರಿದರು!

Published : Aug 09, 2024, 09:19 PM IST

ಕೋಲಾರದ ಯುವಕ ಹಾಗೂ ಆಂಧ್ರಪ್ರದೇಶದ ಯುವತಿ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿ ಮೊದಲ ರಾತ್ರಿಗೂ ಮುನ್ನವೇ ಮಸಣ ಸೇರಿದ್ದಾರೆ.

ಕೋಲಾರದ ಯುವಕ ಹಾಗೂ ಆಂಧ್ರಪ್ರದೇಶ ಯುವತಿ ಇಬ್ಬರೂ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡಿದ್ದರು. ಬೆಳಗ್ಗೆ ಮದುವೆ ಮಾಡಿಕೊಂಡ ಜೋಡಿಗೆ, ಗುರು ಹಿರಿಯರೆಲ್ಲಾ ನಿಂತು ನೂರು ಕಾಲ ಒಟ್ಟಿಗೆ ಬಾಳಿ ಬದುಕಿ ಅಂತ ಹಾರೈಸಿದ್ದಾರೆ. ಆ ವಧು ವರ ಕೂಡ ಸಂತೋಷದಿಂದ ಸಪ್ತಪದಿ ತುಳಿದಿದ್ದರು. ಆದರೆ, ಮದುವೆಯಾಗಿ ಕೆಲವು ಗಂಟೆಗಳ ನಂತರ ಮನೆಯಲ್ಲಿ ಇಬ್ಬರಿಗೂ ಮೊದಲ ರಾತ್ರಿ ಮಾಡಿಸಲು ಸಿದ್ಧತೆ ಮಾಡಲಾಗುತ್ತಿತ್ತು. ಇಬ್ಬರೂ ಜೋಡಿ ಮನೆಯವರಿಂದ ಪ್ರೇವೇಟ್ ಆಗಿ ಹೋಗಿ ಮಾತಾಡಬೇಕು ಅಂತ ಮನೆಯ ಕೋಣೆಯೊಳಗೆ ಸೇರಿಕೊಂಡಿದ್ದಾರೆ. ಆದರೆ, ಎಷ್ಟೇ ಹೊತ್ತು ಕಳೆದರೂ ಇಬ್ಬರೂ ಕೋಣೆಯಿಂದ ಹೊರಗೆ ಬರಲಿಲ್ಲ.

ಮದುವೆಯಾದ ನಂತರ ಸಂಜೆ ವೇಳೆ ಮಾತನಾಡಲು ಕೋಣೆಯೊಳಗೆ ಹೋದ ಜೋಡಿ ಹೊರಗೆ ಬಾರದ ಹಿನ್ನೆಲೆಯಲ್ಲಿ ಮನರಯವರು ಅಲ್ಲಿಗೆ ಹಗಿದ್ದಾರೆ. ಆದರೆ, ಕೋಣೆಯೊಳಗೆ ಗಾಯಗೊಂಡು ನರಳಾಡುವ ಶಬ್ದ ಕೇಳಿದೆ. ಇದೇನಿದು ಎಂದು ರೂಮಿನೊಳಗೆ ಹೋಗಿ ನೋಡಿದರೆ ಇಬ್ಬರೂ ನವದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇನ್ನು ಕೂಡಲೇ ತರಾತುರಿಯಲ್ಲಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿಯೇ ವಧು ಸಾವನ್ನಪ್ಪಿದ್ದಾಳೆ. ಇನ್ನು ವರನಿಗೆ ಒಂದು ದಿನ ಚಿಕಿತ್ಸೆ ನೀಡಿದರೂ ಗಂಭೀರ ಗಾಯಗೊಂಡಿದ್ದರಿಂದ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.  ಆದರೆ, ಇಬ್ಬರೂ ಕೋಣೆಯಲ್ಲಿದ್ದಾಗ ತಮಗೆ ತಾವೇ ಹರಿತವಾದ ಆಯುಧಗಳಿಂದ ಕೊಯ್ದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more