ಸ್ಯಾಂಟ್ರೋ ರವಿ ಕೇಸ್‌ ಸಿಐಡಿಗೆ ವರ್ಗಾವಣೆ: ಇದರ ಹಿಂದಿನ ಲೆಕ್ಕಾಚಾರ ಏನು?

Jan 18, 2023, 12:52 PM IST

ರೌಡಿಶೀಟರ್‌ ಸ್ಯಾಂಟ್ರೋ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ವೇಗವಾಗಿ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದರು.  ಆದ್ರೂ ಮೈಸೂರು ಪೊಲೀಸರನ್ನು ಬಿಟ್ಟು ಸಿಐಡಿಗೆ ಕೇಸ್‌ ಶಿಫ್ಟ್‌ ಮಾಡಲಾಗಿದೆ. ಸಿಐಡಿಗೆ ಹೋದ ಬಹುತೇಕ ಕೇಸ್‌'ಗಳೆಲ್ಲ ಕ್ಲೀನ್‌ ಚಿಟ್‌ ಆಗಿವೆ. ಹೈಪ್ರೊಫೈಲ್ ಕೇಸ್‌ಗಳೆಲ್ಲಾ ಸಿಐಡಿಯಿಂದ ಕ್ಲೀನ್‌ ಚಿಟ್‌ ಸಿಕ್ಕಿದೆ. ಆದರೂ ರವಿ ಕೇಸ್‌ ಸಿಐಡಿಗೆ ಸರ್ಕಾರ ವರ್ಗಾವಣೆ ಮಾಡಿದೆ. ಹಿಂದಿನ ಕೇಸ್‌ಗಳನ್ನು ಗಮನಿಸಿದಾಗ   ಹೈಪ್ರೊಫೈಲ್ ಕೇಸ್‌ಗಳಿಗೆ   ಸಿಐಡಿ ಕ್ಲೀನ್ ಚಿಟ್ ಕೊಟ್ಟಿದೆ.  DYSP ಗಣಪತಿ ಸೂಸೈಡ್‌ ಕೇಸ್‌ನಲ್ಲಿ ಚಾರ್ಜ್‌ಗೆ  ಕ್ಲೀನ್ ಚಿಟ್. ಮೇಟಿ ಖಾಸಗಿ ವಿಡಿಯೋ ಪ್ರಕರಣದಲ್ಲಿ  ಮಾಜಿ ಸಚಿವ ಮೇಟಿಗೆ ಕ್ಲೀನ್ ಚಿಟ್. DYSP ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಪ್ರಕರಣ ಕೂಡ ಕ್ಲೀನ್ ಚಿಟ್ ಸಿಕ್ಕಿದೆ.