ಶಂಕಿತ ಉಗ್ರರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು: ಜಾಹೀದ್‌ಗೆ 4 ಗ್ರೆನೇಡ್ ತಲುಪಿಸಿದ್ದ ಕೊಲೆ ಆರೋಪಿ !

Jul 31, 2023, 9:36 AM IST

ಜುಲೈ 19 ರಂದು ರಾಜ್ಯ ರಾಜಧಾನಿ ಅಕ್ಷರಶಃ ಬೆಚ್ಚಿಬಿದ್ದಿತ್ತು. ಐಟಿ ಕ್ಯಾಪಿಟಲ್ ಬೆಂಗಳೂರಲ್ಲಿ(bengaluru) ಉಗ್ರರ ಕಬಂಧಬಾಹು ಚಾಚಿಕೊಂಡಿರುವುದು ಆತಂಕ ಮೂಡಿಸಿತ್ತು. ಬೃಹತ್ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನ(suspected terrorists) ಖೆಡ್ಡಾಗೆ ಕೆಡವಿದ್ದರು. ಕಾರ್ಯಾಚರಣೆ ವೇಳೆ ವಾಕಿಟಾಕಿಗಳು, ಕಂಟ್ರಿಮೇಡ್ ಪಿಸ್ತೂಲ್, ಮದ್ದುಗುಂಡುಗಳ ಜೊತೆಗೆ 4 ಸಜೀವ ಗ್ರೆನೇಡ್ಗಳು ಪತ್ತೆಯಾಗಿದ್ದವು. ಶಂಕಿತ ಉಗ್ರ ಜಾಹೀದ್ ತಬ್ರೇಜ್ ಮನೆಯಲ್ಲಿದ್ದ 4 ಗ್ರೆನೇಡ್ಗಳನ್ನ ಸಿಸಿಬಿ(CCB) ವಶಪಡಿಸಿಕೊಂಡಿತ್ತು. ಉಗ್ರ ಜುನೈದ್ ವಿದೇಶದಿಂದ ಗ್ರೆನೇಡ್(Grenade) ಕಳುಹಿಸಿಕೊಟ್ಟಿದ್ದಾನೆ ಅನ್ನೋದು ಸಿಸಿಬಿಗೆ ತಿಳಿದಿತ್ತು. ಆದ್ರೆ ಆ ಗ್ರೆನೇಡ್‌ಗಳನ್ನ ಜಾಹೀದ್ಗೆ ತಲುಪಿಸಿದ್ದು ಯಾರು ಅನ್ನೋ ಪ್ರಶ್ನೆ ಸಿಸಿಬಿಯನ್ನ ಕಾಡುತ್ತಿತ್ತು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜಾಹೀದ್ ತಬ್ರೇಜ್ ಮನೆಗೆ  ಸಲ್ಮಾನ್ ಎಂಬಾತ ಗ್ರೆನೇಡ್ ತಂದುಕೊಟ್ಟಿದ್ದ ಎಂದು ಇದೀಗ ತಿಳಿದುಬಂದಿದೆ. ಈತ ಆರ್.ಟಿ ನಗರ ಕಿಡ್ನಾಪ್, ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಜುನೈದ್ ಜೊತೆ ಒಡನಾಟ ಹೊಂದಿದ್ದ ಆರೋಪಿ ಸಲ್ಮಾನ್, ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ. ಸದ್ಯ ಆರೋಪಿ ಸಲ್ಮಾನ್ ತಲೆಮರೆಸಿಕೊಂಡಿದ್ದು,ಆತನ ಪತ್ತೆಗೆ ಸಿಸಿಬಿ ಸ್ಪೆಷಲ್ ಟೀಂನಿಂದ ಶೋಧ ಮುಂದುವರಿದಿದೆ. 

ಇದನ್ನೂ ವೀಕ್ಷಿಸಿ:  ಖಾಸಗಿ ಸಾರಿಗೆ ಇಲಾಖೆ ಮುಷ್ಕರ ಭವಿಷ್ಯ ಇಂದು ನಿರ್ಧಾರ: ಈ ಸಂಘಟನೆಗಳ ಬೇಡಿಕೆ ಏನು ?