Nov 30, 2023, 2:30 PM IST
ಅವ್ರೆಲ್ಲ ಒಂದೇ ಗ್ಯಾಂಗ್ ನವ್ರು ಒಂದು ಟೀಮ್ ಮಕ್ಕಳು ಇಲ್ಲದವರನ್ನೆ ಟಾರ್ಗೆಟ್ ಮಾಡ್ತಿದ್ರೆ. ಮತ್ತೊಂದು ಟೀಮ್ ಮಕ್ಕಳು ಇರೋ ಬಡವರನ್ನು ಟಾರ್ಗೆಟ್ ಮಾಡ್ತಿದ್ರು. ಹಣದ ಅವಶ್ಯಕತೆ ಇರೋ ಬಡವರ ಬಳಿ ಮಕ್ಕಳನ್ನು ಪಡೆದುಕೊಂಡು ಹಣ ಇರೋರಿಗೆ ಮಾರಾಟ ಮಾಡೋದನ್ನೆ ಕಾಯಕವನ್ನಾಗಿ ಮಾಡ್ಕೊಂಡಿದ್ರು. ಹೀಗೆ ರಾಜ್ಯ ರಾಜಧಾನಿಯಲ್ಲಿ ಹಸುಗೂಸುಗಳ ಮಾರಾಟ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಹೆಡೆಮುರಿ ಕಟ್ಟಿದೆ. ಈ ಖತರ್ನಾಕ್ ಗ್ಯಾಂಗ್ ಮಗು ಮಾರಾಟದಲ್ಲಿ ಬೇರೆ ಬೇರೆ ಟೀಮ್ ಅನ್ನು ಮಾಡ್ಕೊಂಡು ದಂಧೆಯನ್ನು ನಡೆಸುತ್ತಿತ್ತು. ದಂಧೆ ಹಿಂದೆ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆ ವೈದ್ಯರ ಕೈವಾಡವೂ ಸಹ ಇದ್ದೇ ಇದೆ. ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಈ ಗ್ಯಾಂಗ್ ಎಲ್ಲೂ ಪ್ರಾಬ್ಲಂ ಆಗದ ಹಾಗೆ ನೀಟಾಗಿ ಪ್ಲಾನ್ ಅನ್ನು ಮಾಡಿ ದಂಧೆ ಮಾಡ್ತಿತ್ತು. ಅಸಲಿಗೆ ಈ ದಂಧೆ ಕೋರರು ಇಷ್ಟು ದಿನ ಯಾರ ಬಲೆಗೂ ಬೀಳದೆ ಹೇಗೆ ಎಲ್ಲವನ್ನು ನಿಭಾಯಿಸುತ್ತಿದ್ರು ಗೊತ್ತಾ..? ಇಷ್ಟು ಅಚ್ಚುಕಟ್ಟಾಗಿ ದಂಧೆ ಮಾಡ್ತಿದ್ದ ಇವ್ರಿಗೆ ಪೊಲೀಸರೇ ಇನ್ಫಾರ್ಮರ್ಸ್ ಆಗಿದ್ರು ಅನ್ನೋ ಆತಂಕಕಾರಿ ವಿಚಾರ ಸಿಸಿಬಿ ತನಿಖೆ ವೇಳೆ ಗೊತ್ತಾಗಿದೆ. ಹೆತ್ತವರಿಂದ 2 ರಿಂದ 5 ಲಕ್ಷಕ್ಕೆ ಮಗು ಖರೀದಿ ಮಾಡ್ತಿದ್ದ ಈ ಗ್ಯಾಂಗ್ ಬೇಕಾದವರಿಗೆ 5 ರಿಂದ 10 ಲಕ್ಷಕ್ಕೆ ಮಾರ್ತಿದ್ರು ಅಲ್ಲದೆ ಒಬ್ಬೊಬ್ಬರಿಗೆ ಒಂದೊಂದು ಟಾಸ್ಕ್ ಅನ್ನೂ ನೀಡಲಾಗ್ತಿತ್ತು.
ಇದನ್ನೂ ವೀಕ್ಷಿಸಿ: ರಕ್ತದಾನಿಗಳ ಕೊರತೆ, ಬರಿದಾಗುತ್ತಿವೆ ಬ್ಲಡ್ ಬ್ಯಾಂಕ್‌ಗಳು: ತುರ್ತು ಪರಿಸ್ಥಿತಿಯಲ್ಲಿ ಬ್ಲಡ್‌ಗಾಗಿ ರೋಗಿಗಳ ಪರದಾಟ