Sep 25, 2023, 10:51 AM IST
ಗೋಮಾಂಸ ಸಾಗಾಟ ಮಾಡ್ತಿದ್ದ ಕಾರಿಗೆ ಉದ್ರಿಕ್ತರು ಬೆಂಕಿಯನ್ನು ಹಚ್ಚಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ(Doddaballapur) ನಡೆದಿದೆ. 5 ವಾಹನದಲ್ಲಿ ಏಳು ಜನ 15 ಟನ್ ಗೋಮಾಂಸ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಹಿಂದುಪುರದಿಂದ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗ್ತಿದೆ. ಗೋ ಮಾಂಸ (Beef) ಸಾಗಿಸುತ್ತಿದ್ದ ವಾಹನ ತಡೆದು ಶ್ರೀರಾಮ ಸೇನೆ ಕಾರ್ಯಕರ್ತರು(Sri Ram Sena activists) ಬೆಂಕಿ ಹಚ್ಚಿದ ಹಿನ್ನೆಲೆ ಅವರನ್ನು ಪೊಲೀಸರು(police) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಈ ಟ್ರಕ್‌ಗಳನ್ನು ಹಿಡಿದು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆಯನ್ನು ಸಹ ಮಾಡಿದರು.ಕಾನೂನಿನ ಪ್ರಕಾರ, ಹಸು, ಕರು, ಎಮ್ಮೆ, ಎತ್ತು ಹಾಗೂ 13 ವರ್ಷ ಕೆಳಗಿನ ಕೋಣ ಹತ್ಯೆ ನಿಷೇಧ ಮಾಡಲಾಗಿದೆ. ಒಂದು ವೇಳೆ ಗೋ ಹತ್ತೆ ಮಾಡಿದ್ರೆ, 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ದಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು.
ಇದನ್ನೂ ವೀಕ್ಷಿಸಿ: ಅಕ್ರಮ ಗೋ ಮಾಂಸ ಸಾಗಾಟ: ವಾಹನ ತಡೆದು ಬೆಂಕಿ ಇಟ್ಟ ಶ್ರೀರಾಮ ಸೇನೆ ಕಾರ್ಯಕರ್ತರು