Jan 22, 2022, 1:15 PM IST
ಹುಬ್ಬಳ್ಳಿ (ಜ. 22): ಇಲ್ಲಿನ SBI ಬ್ಯಾಂಕ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆಗೆ ಪ್ಲ್ಯಾನ್ ಮಾಡಲಾಗಿತ್ತು. ಅದ್ಧೂರಿ ಮದುವೆಯಾಗಬೇಕೆಂದು ಖದೀಮನೊಬ್ಬ ಕೈಯಲ್ಲಿ ಚಾಕು ಹಿಡಿದು, ಮಂಕಿ ಕ್ಯಾಪ್ ಧರಿಸಿ ಬ್ಯಾಂಕಿಗೆ ನುಗ್ಗಿ, ಮಹಿಳಾ ಸಿಬ್ಬಂದಿಗೆ ಹೆದರಿಸುತ್ತಾನೆ. 6 ಲಕ್ಷ 30 ಸಾವಿರ ಎಗರಿಸಿ ಎಸ್ಕೇಪ್ ಆಗುವಾಗ ಸಿಕ್ಕಿ ಬಿದ್ದಿದ್ದಾನೆ. ವಿಜಯಪುರ ಮೂಲದ ಪ್ರವೀಣ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿದೆ.