ಆಸ್ತಿ ನೋಂದಣಿ ಮಾಡಿಸೋರೆ ಹುಷಾರ್ ! ಸರ್ಕಾರಿ ಕಚೇರಿಯಲ್ಲೇ ನಿಮ್ಮ ಖಾತೆಗೆ ಬೀಳುತ್ತೆ ಕನ್ನ..!

Sep 24, 2023, 11:04 AM IST

ಹಲವಾರು ಕಾರಣಗಳನ್ನ ಹೇಳಿ ಮೊಬೈಲ್‌ಗೆ ಕಾಲ್ ಮಾಡಿ ಒಟಿಪಿ ಪಡೆದು ಹಣ ಲಪಟಾಯಿಸಿದ ಅದೆಷ್ಟೋ ಘಟನೆ ನಮ್ಮ ಕಣ್ಣ ಮುಂದಿದೆ. ಆದ್ರೆ ಇಲ್ಲಿ ಫೋನ್ ಬರೋದಿಲ್ಲ. ಇಲ್ಲಿ ಕೇವಲ ಬಯೋ ಮೆಟ್ರಿಕ್ ಥಂಬ್(Biometric Thumb) ನೀಡಿದ್ರೆ ಸಾಕು ನಿಮ್ಮ ಖಾತೆಯ ಹಣ ಢಮಾರ್ ಆಗೊತ್ತೆ ಹುಷಾರ್. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೀತಾ ಇರೋದು ವಿಪರ್ಯಾಸ. ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ಶುಲ್ಕ ಏರಿಕೆ ಆಗ್ತಿರೋದ್ರಿಂದ ಜನರು ಮುಗಿಬಿದ್ದು ಆಸ್ತಿ ನೊಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಖದೀಮರೂ ಕೂಡ ಫುಲ್ ಆ್ಯಕ್ಟೀವ್ ಆಗಿದ್ದು ಸರ್ಕಾರದ ಕಚೇರಿಯನ್ನೇ ಬಳಸಿಕೊಂಡಿದ್ದಾರೆ. ಆಸ್ತಿ ನೋಂದಣಿಗೆ ಆಧಾರ್ ಪಡೆಯಲು ರಿಜಿಸ್ಟ್ರಾರ್ ಕಚೇರಿಯಲ್ಲಿ 2 ಸಾಫ್ಟ್ವೇರ್ಗೆ(Kaveri 2 software) ಥಂಬ್ ನೀಡಬೇಕಾಗುತ್ತದೆ. ಹೀಗೇ ಬೆರಳಚ್ಚು ನೀಡಿದ ಬಳಿಕ ಕಂಪ್ಯೂಟರ್ನಲ್ಲಿ ಆಧಾರ್ ದಾಖಲೆಗಳು ಪಡೆದು ರಿಜಿಸ್ಟ್ರೇಷನ್ ಪ್ರೊಸೆಸ್ ಮುಂದುವರೆಯುತ್ತದೆ. ಆದರೆ ಮಂಗಳೂರಿನ(Mangaluru) ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೇ ಬೆರಳಚ್ಚು ನೀಡಿದ ಹಲವು ಜನರ ಖಾತೆಯಿಂದ ಲಕ್ಷ, ಲಕ್ಷ ಹಣ ವರ್ಗಾವಣೆ ಆಗಿದ್ದು ಜನರು ಕಂಗಾಲಾಗಿದ್ದಾರೆ.

ಇನ್ನ ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದ್ದು, ಪೊಲೀಸರು ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ(sub registrar office) ಪರಿಶೀಲನೆ ನಡೆಸಿದ್ದಾರೆ. ಆದರೆ ಕಾವೇರಿ 2 ಸಾಫ್ಟ್ವೇರ್ನ ಎಲ್ಲಾ ಕಂಟ್ರೋಲ್ ಬೆಂಗಳೂರಿನಲ್ಲಿ ಇರೋ ಕಾರಣ ಪೊಲೀಸರಿಗೆ ಇಲ್ಲಿವರೆಗೂ ಏನೂ ಕ್ಲೂ ಸಿಕ್ಕಿಲ್ಲ. ಕಾವೇರಿ 2 ಸಾಫ್ಟ್ವೇರ್ ತರಾತುರಿಯಲ್ಲಿ ಜಾರಿಗೊಳಿಸಿದ ಪರಿಣಾಮ ಈ ಸಮಸ್ಯೆ ಎದುರಾಗಿದೆ ಅಂತ ಹೇಳಲಾಗ್ತಿದೆ. ಸೈಬರ್ ವಂಚಕರು ಆಧಾರ್ ಸಕ್ರಿಯಗೊಳಿಸಿ ಪಾವತಿ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಹಣ ಲಪಟಾಯಿಸುತ್ತಿರುವ ದೂರುಗಳು ಹೆಚ್ಚಾಗಿವೆ. ಸೈಬರ್ ವಂಚಕರು ತಮ್ಮ ವಂಚನಾ ಜಾಲಕ್ಕೆ ಹೊಸಹೊಸ ತಂತ್ರಗಾರಿಕೆ ಬಳಸುತ್ತಿದ್ದು, ಒಟಿಪಿ, ಸಿವಿವಿ, ಬ್ಯಾಂಕ್ ವಿವರ ಬೇಕಾಗಿಲ್ಲ. ಯಾವುದೇ ಪ್ರಕ್ರಿಯೆಗೆ ಫಿಂಗರ್ ಪ್ರಿಂಟ್ ನೀಡಿದರೆ ಅನಧಿಕೃತ ಬಯೋ ಮೆಟ್ರಿಕ್ ಸಾಧನ ಬಳಸಿ ಖಾತೆಗಳಿಂದ ಗರಿಷ್ಠ 10 ಸಾವಿರ ರೂ. ದೋಚುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಅಭಿಮಾನಿಗಳಿಗೋಸ್ಕರ ಕುಣಿದು ಕುಪ್ಪಳಿಸಿದ ರಾಜ್‌ಕುಮಾರನ ಕುವರ !