Jun 30, 2023, 9:44 AM IST
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಜನತೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಯಾಕೆಂದರೆ ಇದರ ಹೆಸರಿನಲ್ಲಿ ಹಲವಾರು ಫೇಕ್ ಆ್ಯಪ್‌ಗಳು ಸದ್ದು ಮಾಡುತ್ತಿವೆ. ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಐದಾರು ಫೇಕ್ ಆ್ಯಪ್‌ಗಳು ಓಡಾಡುತ್ತಿದ್ದು, ಒಂದು ವೇಳೆ ಜನತೆ ಇಲ್ಲಿ ತಮ್ಮ ಮಾಹಿತಿಯನ್ನು ಹಾಕಿದ್ರೆ ಅವರ ಅಕೌಂಟ್ ಹ್ಯಾಕ್ ಆಗಲಿದೆ. ಗೃಹ ಲಕ್ಷ್ಮೀ ಯೋಜನೆಗೆ ಸರ್ಕಾರದಿಂದ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡಲಾಗುತ್ತೆ ಎಂದು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಆದ್ರೆ ಸರ್ಕಾರ ಇಲ್ಲಿತನಕ ಗೃಹಲಕ್ಷ್ಮೀ ಆ್ಯಪ್‌ನನ್ನು ಬಿಡುಗಡೆಗೊಳಿಸಿಲ್ಲ. ಇನ್ನೂ ಈ ಯೋಜನೆಗೆ BPL, APL, ಅಂತ್ಯೋದಯ ಕಾರ್ಡ್‌ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ.
ಇದನ್ನೂ ವೀಕ್ಷಿಸಿ: ಬಾಡಿಗೆಗೆ ಮನೆ ಕೊಡುವ ಮುನ್ನ ಎಚ್ಚರ..ಎಚ್ಚರ.! : ಲಿವಿಂಗ್ ಟುಗೆದರ್‌ನಲ್ಲಿದ್ದ ಖತರ್ನಾಕ್ ಜೋಡಿಯಿಂದ ದರೋಡೆ