Oct 19, 2023, 11:12 AM IST
ಭೀಮಾತೀರದ ಹೆಸ್ರು ಕೇಳಿದ್ರೆ ಸಾಕು ಎಂಥಾ ಪಂಟರ್‌ಗಳು ಕೂಡ ಬೇಡಪ್ಪ ಇದ್ರು ಸಹವಾಸ ಅಂತಾರೆ. ಯಾಕಂದ್ರೆ ಇಲ್ಲಿನ ಸರಣಿ ಹತ್ಯಾಕಾಂಡಗಳು, ಗ್ಯಾಂಗ್ ವಾರ್ ಮತ್ತು ಗನ್(GUN) ಸಂಸ್ಕೃತಿ ಭೀಮಾತೀರಕ್ಕೆ ಕಳಂಕ ತಂದಿವೆ. ಇದನ್ನ ಅಳಿಸಿ ಹಾಕೋದಕ್ಕೆ ಪೊಲೀಸರು ಇನ್ನಿಲ್ಲದ ಪ್ರಯತ್ನಗಳನ್ನ ನಡೆಸಿದ್ರು ಗನ್ ಹಾವಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯ್ತಿಯ ಸದಸ್ಯನೇ ಗನ್ ತಂದು ಪಿಡಿಓಗೆ(Pdo) ಬೆದರಿಕೆ ಹಾಕಿದ್ದಾನೆ. ಜಾಕೀರ್ ಮನಿಯಾರ್ ಎಂಬಾತ ಬಿಲ್ ಬಿಡುಗಡೆ ಮಾಡಿಲ್ಲ ಅಂತಾ ಪಿಡಿಓಗೆ ಹಲ್ಲೆ ಮಾಡಿದ್ದಾನೆ ಅಂತೆ. ಹೀಗಾಗಿ ವಿಶ್ವನಾಥ ರಾಠೋಡ್ ಗ್ರಾಮ ಪಂಚಾಯ್ತಿ ಸದಸ್ಯನ ವಿರುದ್ಧ ದೂರು ದಾಖಲಿಸಿದ್ದಾನೆ.ಇನ್ನು ಗ್ರಾಮ ಪಂಚಾಯಿತಿ (Gram Panchayat) ಸದಸ್ಯನಾಗಿರುವ ಜಾಕೀರ್ ಪಂಚಾಯ್ತಿಯಲ್ಲಿ ತನ್ನದೆೇ ಕಾರುಬಾರು ನಡೆಸ್ತಿದ್ದಾನೆ ಅಂತೆ. ತಾನು ಹೇಳಿದ್ರೆ ಮಾತ್ರ ಬಿಲ್ ಬಿಡುಗಡೆ ಮಾಡಬೇಕು ಎಂದು ಅವಾಜ್ ಹಾಕ್ತಾನಂತೆ. ಜಾಕಿರ್ ಕಾಟಕ್ಕೆ ಉಳಿದ ಗ್ರಾಮಪಂಚಾಯ್ತಿ ಸದಸ್ಯರು ಬೇಸತ್ತು ಹೋಗಿದ್ದಾರೆ. ಭೀಮಾತೀರದಲ್ಲಿ ಗನ್ ಸಂಸ್ಕೃತಿ ನಿಲ್ಲಬೇಕು ಶಾಂತಿ ನೆಲಸಬೇಕು ಅನ್ನೋದು ಎಲ್ಲರ ಬಯಕೆ. ಆದ್ರೆ ಪೊಲೀಸರು ಎಷ್ಟೇ ಕ್ರಮ ಕೈಗೊಂಡ್ರು ಪುಡಿರೌಡಿಗಳ ಹಾವಳಿ ಮಾತ್ರ ಇನ್ನೂ ನಿಂತಿಲ್ಲ..ಇನ್ನಾದರು ಖಾಕಿ ಇತಹವರ ಹೆಡೆಮುರಿ ಕಟ್ಟಬೇಕಿದೆ.
ಇದನ್ನೂ ವೀಕ್ಷಿಸಿ: ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ