ಹುಡುಗಿಯರ ಜತೆಗೆ ಪೋಲಿ ಪ್ರಿನ್ಸಿಪಾಲ್ ಚಾಟಿಂಗ್: ಸಚಿನ್‌ ಕುಮಾರನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು!

ಹುಡುಗಿಯರ ಜತೆಗೆ ಪೋಲಿ ಪ್ರಿನ್ಸಿಪಾಲ್ ಚಾಟಿಂಗ್: ಸಚಿನ್‌ ಕುಮಾರನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು!

Published : Jan 07, 2025, 11:29 AM IST

ವಿಷಯದ ಗಂಭೀರತೆಯನ್ನ ಅರಿತ ಮನಗೂಳಿ ಪೊಲೀಸರು ಪೋಲಿ ಪ್ರಿನ್ಸಿಪಾಲ್‌ ಸಚಿನ್‌ಕುಮಾರನನ್ನ ಬಂಧಿಸಿದ್ದಾರೆ. ಆದರೆ, ಮಕ್ಕಳಿಗೆ ದಾರಿದೀಪವಾಗಬೇಕಿದ್ದ ಪ್ರಾಂಶುಪಾಲನ ಪರಮ ನೀಚ ಕೆಲಸದಿಂದ ಪೋಷಕರು ಕಂಗಾಲಾಗಿದ್ದಾರೆ.

ವಿಜಯಪುರ(ಜ.07):  ಆತ ಹೇಳಿಕೊಳ್ಳಲು ಸರ್ಕಾರಿ ಡಿಗ್ರಿ ಕಾಲೇಜು ಪ್ರಿನ್ಸಿಪಾಲ್.‌ ಟೀಚಿಂಗ್‌ ಮಾಡಬೇಕಾದ ಪ್ರಿನ್ಸಿಪಾಲ್‌ ವಿದ್ಯಾರ್ಥಿನಿಯರಿಗೆ ಚಾಟಿಂಗ್, ಚಾಟಿಂಗ್‌ ಅಂತ ಬೆನ್ನು ಬೀಳ್ತಿದ್ದ. ಅವಧಿಗೂ ಮುನ್ನವೇ ವಿದ್ಯಾರ್ಥಿನಿಯರನ್ನ ಕಾಲೇಜಿಗೆ ಕರೆಯಿಸಿಕೊಂಡು ಲೈಂಗಿಕ ಕಿರುಕುಳ ಕೊಡ್ತಿದ್ದ. ಕೊನೆಗೂ ಪೋಲಿ ಪ್ರಿನ್ಸಿಪಾಲ್‌ ಮುಖವಾಡವನ್ನ ಅದೇ ಕಾಲೇಜಿನ ವಿದ್ಯಾರ್ಥಿನಿಯರು ಬಯಲು ಮಾಡಿದ್ದಾರೆ.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿದ್ದ ಪ್ರಿನ್ಸಿಪಾಲ್ ಸಚಿನಕುಮಾರ್‌, ಹುಡುಗಿಯರ ವಿಷಯದಲ್ಲಿ ತಲೆಕೊಂಡಿದ್ದ. ಕಾಲೇಜಿಗೆ ಬರುವ ವಿದ್ಯಾರ್ಥಿನಿಯರ ಮೊಬೈಲ್‌ ನಂಬರ್‌, Instagram ID ಪಡೆದು ಚಾಟಿಂಗ್‌ ಮಾಡ್ತಿದ್ದ. ವಿಡಿಯೋ ಕಾಲ್‌ ಮಾಡುವಂತೆ ಪೀಡಿಸ್ತಿದ್ನಂತೆ. ಕಾಲೇಜು ಆರಂಭಕ್ಕೂ ಮುನ್ನವೇ ಬಾ, ನಾನು ಬರ್ತಿನಿ ಎನ್ನುತ್ತಿದ್ದ. ಚಾಟಿಂಗ್ ಸ್ಕ್ರೀನ್ ಶಾಟ್ ಗಳು ವೈರಲ್ ಆಗ್ತಿದ್ದಂತೆ, ರೊಚ್ಚಿಗೆದ್ದ ಪೊಷಕರು, ಸಂಬಂಧಿಕರು, ವಿದ್ಯಾರ್ಥಿಗಳ ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ಸಚಿನ್ ಕುಮಾರ್ ಚಳಿ ಬಿಡಿಸಿದ್ದಾರೆ.  

ಬೆಳಗಾವಿ: ಹೊಲದಲ್ಲಿ ಕೆಲಸ ಮಾಡ್ತಿದ್ದ ರೈತನ ಅಪಹರಿಸಿ ಹಲ್ಲೆ!

ಈ ಪೋಲಿ ಸಚಿನಕುಮಾರ್ ಮಾತ್ರ ನಾನು ಆ ರೀತಿ ನಡೆದುಕೊಂಡೇ ಇಲ್ಲ ಎಂದು ಸಮುಜಾಯಿಷಿ ನೀಡಲು ಯತ್ನಿಸಿದ್ದಾನೆ. ರೊಚ್ಚಿಗೆದ್ದ ಪೋಷಕರು ಪ್ರಿನ್ಸಿಪಾಲ್ ಮೇಲೆ ಹಲ್ಲೆಗೆ ಯತ್ನಿಸಿದ್ರೆ, ಇತ್ತ, ಘಟನೆ ಖಂಡಿಸಿ ವಿದ್ಯಾರ್ಥಿಗಳು ಕಾಲೇಜು ಗೇಟ್‌ ಗೆ ಬೀಗ ಜಡಿದು  ಪ್ರತಿಭಟಿಸಿದ್ದಾರೆ.  ಎಸ್ಪಿ ಕಚೇರಿಗೆ ಭೇಟಿ ನೀಡಿದ ಮಹಿಳಾ ಸಂಘಟನೆ ಮುಖಂಡರು, ಪ್ರತ್ಯೇಕ ದೂರು ನೀಡಿ ಬಂಧನಕ್ಕೆ ಒತ್ತಾಯಿಸಿದ್ರು. 

ವಿಷಯದ ಗಂಭೀರತೆಯನ್ನ ಅರಿತ ಮನಗೂಳಿ ಪೊಲೀಸರು ಪೋಲಿ ಪ್ರಿನ್ಸಿಪಾಲ್‌ ಸಚಿನ್‌ಕುಮಾರನನ್ನ ಬಂಧಿಸಿದ್ದಾರೆ. ಆದರೆ, ಮಕ್ಕಳಿಗೆ ದಾರಿದೀಪವಾಗಬೇಕಿದ್ದ ಪ್ರಾಂಶುಪಾಲನ ಪರಮ ನೀಚ ಕೆಲಸದಿಂದ ಪೋಷಕರು ಕಂಗಾಲಾಗಿದ್ದಾರೆ.

25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
Read more