ಮ್ಯಾರೆಜ್‌ ದೋಖಾ: ಹಣ ಪಡೆದು ಮದುವೆಯಾಗ್ತಾಳೆ ಸುಂದರ ಯುವತಿ, ಅವಿವಾಹಿತ ಪುರುಷರೇ ಟಾರ್ಗೆಟ್!

ಮ್ಯಾರೆಜ್‌ ದೋಖಾ: ಹಣ ಪಡೆದು ಮದುವೆಯಾಗ್ತಾಳೆ ಸುಂದರ ಯುವತಿ, ಅವಿವಾಹಿತ ಪುರುಷರೇ ಟಾರ್ಗೆಟ್!

Published : Jan 10, 2025, 12:57 PM IST

ಮದುವೆ ಆಸೆ ತೋರಿಸಿ ಜನರಿಂದ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಗ್ಯಾಂಗ್​ ಚಿಕ್ಕೋಡಿಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಜನರ ಕೈಗೆ ತಗ್ಲಾಕಿಕೊಂಡಿದೆ. ಧರ್ಮದೇಟು ನೀಡಿದಾಗ ತಾವು ಮಾಡ್ತಿದ್ದ ವಂಚನೆ ಕಹಾನಿಯನ್ನ ಬಾಯ್ಬಿಟಿದ್ದಾರೆ. 

ಚಿಕ್ಕೋಡಿ(ಜ.10): ನಿಮಗಿನ್ನೂ ಮದುವೆಯಾಗಿಲ್ವಾ? ಹುಡುಗಿ ಹುಡುಕ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿನ ಮಿಸ್​ ಮಾಡ್ದೇ ನೋಡಿ. ಯಾಕಂದ್ರೆ..ಹುಡುಗಿ ಹುಡುಕಿಕೊಡ್ತೀವಿ..ಮದುವೆ ಮಾಡಿಸ್ತೀವಿ ಅಂತಾ ನಂಬಿಸಿ ಲಕ್ಷ ಲಕ್ಷ ಹಣ ದೋಚುವ ಗ್ಯಾಂಗ್​​ ಆಕ್ಟೀವ್​ ಆಗಿದೆ. 

ವಯಸ್ಸಾದ್ರೂ ಮದುವೆಯಾಗದಿದ್ರೆ ಯಾರಿಗೆ ತಾನೇ ಟೆನ್ಷನ್​ ಆಗಲ್ಲ ಹೇಳಿ. ಇತ್ತೀಚಿಗಂತೂ ಗ್ರಾಮೀಣ ಭಾಗದಲ್ಲಿ ವಾಸಿಸುವರಿಗೆ, ಕೃಷಿ ಕಾರ್ಮಿಕರಿಗೆ ಹೆಣ್ಣು ಸಿಗೋದು ದುಸ್ತರವೇ ಎನ್ನುವಂಥ ಸ್ಥಿತಿಯಿದೆ. ಹೀಗಾಗಿ ಅವಿವಾಹಿತ ಪುರುಷರು ಬೇಗ ಒಂದು ಒಳ್ಳೆ ಹೆಣ್ಣು ಸಿಕ್ಕಿ ಮದುವೆಯಾಗಲಿ ಅಂತಾ ಕಂಡಕಂಡ ದೇವರಿಗೆಲ್ಲ ಕೈ ಮುಗೀತಾರೆ. ಹರಕೆಯನ್ನೂ ಕಟ್ಟಿಕೊಳ್ಳುತ್ತಾರೆ. ಹೀಗೆ ಮದುವೆಗಾಗಿ ಹಾತೊರೆಯುವವರನ್ನೇ ಟಾರ್ಗೆಟ್​ ಮಾಡಿ ಲಕ್ಷ ಲಕ್ಷ ದೋಚುವ ಗ್ಯಾಂಗ್ ಉತ್ತರ ಕರ್ನಾಟಕ ಭಾಗದಲ್ಲಿ ಆಕ್ಟೀವ್​ ಆಗಿದೆ.

Viral Video: ಪ್ರೀತ್ಸೆ ಎಂದು ಬೆನ್ನುಬಿದ್ದ, ಆಗಲ್ಲ ಎಂದಿದ್ದಕ್ಕೆ ಎಲ್ಲರ ಎದುರು ಕೊಂದೇಬಿಟ್ಟ!

ಮದುವೆ ಆಸೆ ತೋರಿಸಿ ಜನರಿಂದ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಗ್ಯಾಂಗ್​ ಚಿಕ್ಕೋಡಿಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಜನರ ಕೈಗೆ ತಗ್ಲಾಕಿಕೊಂಡಿದೆ. ಧರ್ಮದೇಟು ನೀಡಿದಾಗ ತಾವು ಮಾಡ್ತಿದ್ದ ವಂಚನೆ ಕಹಾನಿಯನ್ನ ಬಾಯ್ಬಿಟಿದ್ದಾರೆ. 

ಅವಿವಾಹಿತ ಪುರುಷರನ್ನೇ ಟಾರ್ಗೆಟ್ ಮಾಡುವ ಗ್ಯಾಂಗ್, ನಿಮಗೆ ಮದವೆ ಮಾಡಿಸುವುದಾಗಿ ಹೇಳಿ ಹುಡುಗರಿಂದಲೇ 3 ಲಕ್ಷ ರೂಪಾಯಿ ಪಡೆದುಕೊಳ್ತಾರೆ. ಹಣ ಪಡೆದ ಗ್ಯಾಂಗ್ ಸುಂದಯ ಯುವತಿಯ ಜತೆ ಮದುವೆಯನ್ನೂ ಮಾಡಿಸ್ತಾರೆ. ಆದ್ರೆ ಮದುವೆಯಾಯ್ತೆಂದು ಖುಷಿಯಲ್ಲಿದ್ದವರಿಗೆ ಒಂದು ತಿಂಗಳಲ್ಲೇ ಶಾಕ್​ ಕಾದಿರುತ್ತೆ. ತಾಳಿ ಕಟ್ಟಿದ ಒಂದೇ ತಿಂಗಳಲ್ಲಿ ಮನೆಯಲ್ಲಿದ್ದ ಹಣ, ಒಡವೆ ಜತೆಗೆ ಮದುವೆಯಾದವಳು ಎಸ್ಕೇಪ್​ ಆಗ್ತಾಳೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿರೋ ಈ ಗ್ಯಾಂಗ್​ ಗಡಿ ಗ್ರಾಮಗಳಲ್ಲಿ ವಂಚನೆ ಎಸಗುತ್ತಿದೆ. ಅಥಣಿ, ರಾಯಬಾಗ, ಹುಕ್ಕೇರಿ ಹಲವೆಡೆ ಮದುವೆ ಹೆಸರಲ್ಲಿ ದೋಖಾ ಮಾಡಿದೆ. 

ರಾಯಬಾಗ ತಾಲೂಕಿನಲ್ಲಿ ತಗ್ಲಾಕಿಕೊಂಡ ನಕಲಿ ಮದುವೆ ಗ್ಯಾಂಗ್​ ಸದಸ್ಯನನ್ನ ಸದ್ಯ ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಗ್ಯಾಂಗ್​ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿಸ್ತರಿಸಿಕೊಂಡಿದೆ. ವಂಚಕರ ಬಣ್ಣದ ಮಾತಿಗೆ ಮರುಳಾಗಿ ಅಮಾಯಕರು ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು ಶೀಘ್ರವೇ ಈ ನಕಲಿ ಮದುವೆ ಜಾಲವನ್ನ ಸಂಪೂರ್ಣವಾಗಿ ಮಟ್ಟಹಾಕಬೇಕಿದೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more