Dec 5, 2024, 12:32 PM IST
ಬೆಂಗಳೂರು(ಡಿ.05): ಖಲಿಸ್ತಾನಿಯೋ..? ಪಾಕಿಸ್ತಾನಿಯೋ..? ಭೀಕರ ದಾಳಿಯ ಹಿಂದಿ ಅಡಗಿದೆ ಬೆಚ್ಚಿ ಬೀಳೀಸೋ ಭೀಭತ್ಸ ಕಾರಣ. ಅದೇನು ಅನ್ನೋದರ ಕಂಪ್ಲೀಟ್ ಸ್ಟೋರಿ ನಿಮ್ಮ ಮುಂದೆ ತೆರೆದಿಡೋದೆ ಇವತ್ತಿನ ಸುವರ್ಣ ಫೋಕಸ್, ಬಾದಲ್ ರಕ್ತ ರಹಸ್ಯ!
ಅಷ್ಟಕ್ಕೂ ರಾಮ್ ರಹೀಂ ಬಾಬಾಗೆ ಬೆಂಬಲ ಕೊಟ್ಟಿದ್ರಿಂದ, ಇಂಥದ್ದೊಂದು ಕರಾಳ ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಬರ್ಬೋದು ಅನ್ನೋ ಕಲ್ಪನೆ, ಆ ನಾಯಕರಿಗೆ ಇರಲೇ ಇಲ್ವಾ? ಅದೆಲ್ಲಾ ಬಿಡಿ, ತಪ್ಪು ಮಾಡಿ ಶಿಕ್ಷೆ ಅನುಭವಿಸ್ತಾ ಇರೋರನ್ನ ಕೊಲ್ಲಕ್ಕಂತ ಒಬ್ಬ ಬಂದುಬಿಟ್ನಲ್ಲಾ, ಅವನ ಆ ಕೃತ್ಯಕ್ಕೆ ಕಾರಣ ಏನು?.
ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ
ಇದ್ದಕ್ಕಿದ್ದ ಹಾಗೇ ಸ್ವರ್ಣ ಮಂದಿರದ ಗೇಟನ್ನ ದಾಟಿಕೊಂಡು, ಆಗಂತುಕ ಒಬ್ಬ ಬಂದೇ ಬಿಟ್ಟ.. ನೋಡನೋಡುತ್ತಲೇ ಗುಂಡು ಹಾರಿಸಿ ಪ್ರಾಣ ತೆಗೆಯೋಕೆ ಮುಂದಾದ.. ಅವನ್ಯಾರು? ಅವನನ್ನ ಕಳಿಸಿದ್ಯಾರು? ಅವನ ಉದ್ದೇಶ ಏನಿತ್ತು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..
ಏನು ಆ ಇತಿಹಾಸ? ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ? ಈ ದ್ವೇಷದ ಕತೆ ಶುರುವಾಗಿದ್ದು ಎಲ್ಲಿಂದ?. ಬರೀ ಉತ್ತರ ಕಂಡುಹಿಡಿದ ಮಾತ್ರಕ್ಕೇ ಪಂಜಾಬಿನ ಕಾಳ್ಗಿಚ್ಚು ಶಮನ ವಾಗುವಂಥದ್ದಲ್ಲ. ಈ ಕತೆ ಇನ್ನೂ ಹೇಗೇಗೆಲ್ಲಾ ಮುಂದುವರೆಯೋದು ಬಾಕಿ ಇದೆಯೋ ಗೊತ್ತಿಲ್ಲ.