ತಮಟೆ ಕಲಾವಿದನನ್ನ ಪ್ರೀತಿಸಿದಕ್ಕೆ ಕತ್ತು ಹಿಸುಕಿದ ಅಪ್ಪ..!
ಅವಳು ಸತ್ತಳು ಅಂತ ಪ್ರೇಮಿ ರೈಲಿನ ಹಳಿಗೆ ತಲೆ ಕೊಟ್ಟ..!
ದಲಿತ ಹುಡುಗನನ್ನ ಪ್ರೀತಿಸಿದಕ್ಕೆ ತಂದೆ ಮಗಳನ್ನೇ ಕೊಂದ..!
ಅವಳು ಸುಂದರ ಚೆಲುವೆ. ಇನ್ನೂ ಜಸ್ಟ್ 20 ವರ್ಷ. ಆಟ, ಪಾಟ ಅಂತ ಅಂದುಕೊಂಡು ಆಕೆ ಇದ್ದುಬಿಟ್ಟಿದ್ದಿದ್ರೆ ಇವತ್ತು ನಾವು ಆಕೆ ಬಗ್ಗೆ ಹೇಳೋ ಅವಶ್ಯಕತೆಯೇ ಇರುತ್ತಿರಲಿಲ್ಲ. ಆದ್ರೆ ಆಕೆ ಲವ್ನಲ್ಲಿ ಬಿದ್ದುಬಿಟ್ಟಿದ್ಲು. ಅದೇ ಆಕೆ ಮಾಡಿದ ಮೊದಲ ಮತ್ತು ಕೊನೆ ಯ ತಪ್ಪು. ಆಕೆ ಪ್ರೀತಿ ಮಾಡಿದ್ದು ತಪ್ಪಲ್ಲ.. ಆದ್ರೆ ಆಕೆ ಪ್ರೀತಿಸಿದವನ ಜಾತಿ ಅಕೆಯ ಹೆತ್ತವರಿಗೆ ತಪ್ಪಾಗಿ ಕಾಣಿಸಿಬಿಟ್ಟಿತ್ತು. ಪರಿಣಾಮ ಇವತ್ತು ಆ ಹೆಣ್ಣುಮಗಳ ತನ್ನ ಜನ್ಮದಾತನಿಂದಲೇ ಮಸಣ ಸೇರಿದ್ದಾಳೆ. ಪ್ರೀತಿಸಿದ ತಪ್ಪಿಗೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಳೆ. ಇನ್ನೂ ಆಕೆ ಸತ್ತ ನಂತರ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಶರಣಾಗಿಬಿಟ್ಟಿದ್ದಾನೆ.ಒಂದೇ ಗಲ್ಲಿಯಲ್ಲಿದ್ದ ಕೀರ್ತಿ ಮತ್ತು ಗಂಗಾ ಇಬ್ಬರೂ ಪ್ರೀತಿಸಿದ ತಪ್ಪಿಗೆ ಇವತ್ತು ಮಸಣ ಸೇರಿದ್ದಾರೆ.. ತಂದೆ ಕೃಷ್ಣಮೂರ್ತಿನೇ ಕೀತಿಯನ್ನ ಕೊಂದುಬಿಟ್ಟಿದ್ದಾನೆ.ಈ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.
ಇದನ್ನೂ ವೀಕ್ಷಿಸಿ: 3ನೇ ವಾಗ್ದಾನ ಪೂರೈಸಲು ಮೋದಿ ತ್ರಿವಿಕ್ರಮ ಹೆಜ್ಜೆ: ಭಾರತದ ಭವಿಷ್ಯ ಬದಲಿಸುತ್ತಾ ಯುಸಿಸಿ..?