ಆಸ್ತಿ ವಿಚಾರ ನಡೆದ ಗಲಾಟೆಯಲ್ಲಿ ತಂದೆಯೇ ಹೆತ್ತ ಮಗನ ಕೈ, ಕಾಲು ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎರೇಗೌಡನಹಳ್ಳಿ ನಡೆದಿದೆ.
ಮಂಡ್ಯ, (ಮಾ.11): ಆಸ್ತಿ ವಿಚಾರ ನಡೆದ ಗಲಾಟೆಯಲ್ಲಿ ತಂದೆಯೇ ಹೆತ್ತ ಮಗನ ಕೈ, ಕಾಲು ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎರೇಗೌಡನಹಳ್ಳಿ ನಡೆದಿದೆ.
ಎರೆಗೌಡನಹಳ್ಳಿ ಗ್ರಾಮದ ನಾಗೇಶ್ ಎಂಬಾತನೇ ತಂದೆ ಹಾಗೂ ಕುಟುಂಬಸ್ಥರಿಂದಲೇ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಘಟನೆ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಗೇಶ್ ತನ್ನ ತಂದೆ ಬಳಿ ಆಸ್ತಿಯಲ್ಲಿ ಪಾಲುಕೊಡುವಂತೆ ಕೇಳಿದ್ದು, ಇದರಿಂದ ಕೋಪಗೊಂಡಿರೋ ತಂದೆ ಹಾಗೂ ಕುಟುಂಬಸ್ಥರು ಆತನ ಕೈ-ಕಾಲು ಕಟ್ಟಿಹಾಕಿ ಮನಬಂದಂತೆ ಥಳಿಸಿ ಮನೆಯ ಬಳಿ ಹಾಕಿದ್ದರಂತೆ. ಇತ್ತ ಮನೆಗೆ ಹೋಗಿ ಆಸ್ತಿ ವಿಚಾರವಾಗಿ ಮಾತನಾಡಿ ಬರುವುದಾಗಿ ಹೇಳಿ ಹೋಗಿದ್ದ ಗಂಡ ಮರಳಿ ಬಾರದ ಕಾರಣ ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಗಂಡನ ಸ್ಥಿತಿ ಕಂಡು ಕಂಗಾಲಾದ ಪತ್ನಿ ಭಾರತಿ, ಸ್ಥಳೀಯರ ನೆರವು ಪಡೆದು ಗಂಡನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಮಾವ ಹಾಗೂ ಕುಟುಂಬಸ್ಥರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.