ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು;  ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ

ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು; ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ

Published : Aug 14, 2025, 12:55 PM IST
ಹಾಸನ ಜಿಲ್ಲೆಯಲ್ಲಿ ತಂದೆಯೊಬ್ಬ ಮಗನನ್ನು ಕೊಂದು ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಮಗನ ಅಂತ್ಯಕ್ರಿಯೆಗೆ ಸಂಬಂಧಿಕರು ಒತ್ತಾಯಿಸಿದಾಗ ಕಿರಿಯ ಮಗ ಸತ್ಯ ಬಾಯ್ಬಿಟ್ಟಿದ್ದಾನೆ.

ದೃಶ್ಯ ಕನ್ನಡದ ಕ್ರೈಂ ಥ್ರಿಲ್ಲರ್​ ಚಿತ್ರ. ಈ ಚಿತ್ರವನ್ನೇ ನೆನಪಿಸೋ ಕೊಲೆವೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ತಂದೆ ಮಗನನ್ನ ಕೊಂದು ಹೂತು ಹಾಕಿದ್ದಾನೆ. ಆತನ ಸಾವಿನ ಬಳಿಕ ಈ ಮರ್ಡರ್ ಮಿಸ್ಟ್ರಿ ಬಯಲಾಗಿದೆ. ಮೃತ ಗಂಗಾಧರ್​​ ಹತ್ತು ದಿನಗಳ ಹಿಂದೆ ಮೃತಪಡುತ್ತಿದ್ದಂತೆ ಸಂಬಂಧಿಕರು ಹಿರಿಯ ಮಗ ರಘುನನ್ನ ಅಂತ್ಯಸಂಸ್ಕಾರಕ್ಕೆ ಕರೆಸುವಂತೆ ಸಂಬಂಧಿಕರು ಒತ್ತಾಯಿಸಿದ್ರು. ತಮ್ಮ ರೂಪೇಶ್​​​​​​​ ಅಣ್ಣನ ಮೊಬೈಲ್​ ಸ್ವಿಚ್ಡ್​ ಆಫ್​​​​​ ಆಗಿದೆ ಅಂತ ಹೇಳಿ ಬೇರೆ ನಂಬರ್​​ ಕೊಟ್ಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಸಂಬಂಧಿಕರು ಹಾಲು ಬಿಡೋ 3ನೇ ದಿನಕ್ಕಾದ್ರೂ ರಘನನ್ನು ಕರೆಸಲೇಬೇಕೆಂದು ರೂಪೇಶ್​​ಗೆ ಒತ್ತಡ ಹಾಕಿದ್ದಾರೆ. ಆಗ ರೂಪೇಶ್​​ ಬೇರೆ ದಾರಿಯಿಲ್ಲದೇ ಸತ್ಯ ಬಾಯ್ಬಿಟ್ಟಿದ್ದಾನೆ. ರಘು ನಾಪತ್ತೆ ಆಗಿಲ್ಲ. ಆಗಸ್ಟ್​ 14, 2023 ರಂದು ತಂದೆನೇ ಅಣ್ಣನನ್ನ ಕೊಲೆ ಮಾಡಿದ್ದಾರೆ ಎಂದು ರೂಪೇಶ್​ ಹೇಳಿದ್ದಾನೆ. 32 ವರ್ಷದ ಮೃತ ರಘುಗೆ ಮದುವೆ ಆಗಿದ್ದು 5 ವರ್ಷದ ಮಗುವಿದೆ. ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ಕುಡಿತದ ಚಟಕ್ಕೆ ಬಿದ್ದ ರಘು ತಂದೆಗೆ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ತಂದೆ ಮಗನನ್ನ ಕೊಲೆ ಮಾಡಿದ್ದಾರೆ. ಈ ಸುದ್ದಿ ಯಾರಿಗೂ ಗೊತ್ತಾಗಬಾರದು ಅಂತ ತನ್ನ ಮನೆಯ ಹಿಂಭಾಗದಲ್ಲಿ ಇರುವ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದಾನೆ. ಕಿರಿಯ ಮಗ ರೂಪೇಶ್​​ಗೆ ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈ ಸುದ್ದಿಯನ್ನ ಯಾರ ಬಳಿಯೂ ಹೇಳಿಲ್ಲ ಅಂತ ಸ್ವಲ್ಪ ಬುದ್ಧಿಮಾಂದ್ಯನಾದ ರೂಪೇಶ್​ ಸಂಬಂಧಿಕರ ಬಳಿ ಹೇಳಿಕೊಂಡಿದ್ದಾನೆ.

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more