ಹೆಂಡತಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ: ಸಾವಿಗೂ ಮುನ್ನ ಸಹೋದರನಿಗೆ ಆಡಿಯೋ ಮೆಸೇಜ್..!

ಹೆಂಡತಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ: ಸಾವಿಗೂ ಮುನ್ನ ಸಹೋದರನಿಗೆ ಆಡಿಯೋ ಮೆಸೇಜ್..!

Published : Sep 15, 2023, 10:21 AM IST

ಆತ ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಾದ್ರು. ಕೆಲಸ ನಿರ್ವಹಿಸುತ್ತಿದಿದ್ದು ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿ‌. ನೋಡೋರ ಕಣ್ಣಿಗೆ ಕೈ ತುಂಬ ಸಂಬಳ ಪಡೆಯುವ ಇಂಜಿನಿಯರ್ ಆಗಿದ್ರೆ. ತನ್ನ ಮಡದಿಗೆ ಮಾತ್ರ ವಿಲನ್ ಆಗಿ ಬಿಟ್ಟಿದ್ದ. ದಿನ ಕಳೆದಂತೆ ಪತ್ನಿ ಕೊಡ್ತಿದ್ದ ಕಿರುಕುಳಕ್ಕೆ ಇದೀಗ ಆತನೇ ಪ್ರಾಣಬಿಟ್ಟಿದ್ದಾನೆ.
 

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ. ತಿಂಗಳಾದ್ರೆ ಸಾಕು ಕೈತುಂಬ ಸಂಬಳ. ಐಷಾರಾಮಿ ಬದುಕು.. ಎಲ್ಲವೂ ಚೆನ್ನಾಗಿಯೇ ಇತ್ತು. ಸತಿಯಾಗಿ ಬಂದವಳು ಆತನ ಬದುಕಿಗೆ ಕಿಚ್ಚು ಹಚ್ಚಿದ್ಳು. ಕುಂದೂರು ಪಾಳ್ಯದ ನಿವಾಸಿ ಮಂಜುನಾಥ್ ಪತ್ನಿ(Wife) ಕಿರುಕುಳದಿಂದ ಜೀವವನ್ನೇ ಕಳೆದುಕೊಂಡಿದ್ದಾನೆ. ಸಾಯುವ ಮೊದಲು ಆಡಿಯೋ ರೆಕಾರ್ಡ್‌(Audio Record) ಮಾಡಿದ್ದಾನೆ. ನನಗೆ ಬದುಕಲು ಆಗ್ತಿಲ್ಲ. ನನ್ನ ಹೆಂಡತಿ ಪ್ರತಿನಿತ್ಯವೂ ಚುಚ್ಚಿಚುಚ್ಚಿ ಮಾತಾಡ್ತಾಳೆ. ನಾನು ಸಾಯ್ತಿದ್ದೀನಿ ಎಲ್ಲರೂ ಕ್ಷಮಿಸಿ ಬಿಡಿ. ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ತನ್ನ ಸಹೋದರನಿಗೆ ಆಡಿಯೋ ಮೆಸೆಜ್ ಕಳುಹಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯಿರುವ ಕುಂದೂರು ಪಾಳ್ಯದಲ್ಲಿ. ಕುಂದೂರು ಪಾಳ್ಯದ ನಿವಾಸಿ ಮಂಜುನಾಥ್ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಹೆಣ್ಣು ಮಗು ಕೂಡ ಇದೆ.. ಆದ್ರೆ ಏನಾಯ್ತೋ ಗೊತ್ತಿಲ್ಲ.. ಕೆಲ ವರ್ಷಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ಶುರುವಾಗಿತ್ತಂತೆ. ಹಲವು ಬಾರಿ ಸಂಬಂಧಿಕರು ರಾಜಿ ಪಂಚಾಯ್ತಿ ಮಾಡಿಸಿದ್ರಂತೆ. ಇಷ್ಟಾದ್ರೂ ಪರಿಸ್ಥಿತಿ ಸರಿಹೋಗಿರಲಿಲ್ಲ. ಈಗ ಮನನೊಂದ ಮಂಜುನಾಥ್ ಇಹಲೋಕವನ್ನೇ ತ್ಯಜಿಸಿದ್ದಾನೆ. ಸದ್ಯ ಮಂಜುನಾಥ್ ಪೋಷಕರು ಕಿಬ್ಬನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ವಸೂಲಿಗಿಳಿದ ಬಸ್‌ಗಳ ಮೇಲೆ ಅಧಿಕಾರಿಗಳ ರೇಡ್..60ಕ್ಕೂ ಹೆಚ್ಚು ಕೇಸ್ ದಾಖಲು

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more