ಬೆಳಗಾವಿ: ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಅಣ್ಣ!

ಬೆಳಗಾವಿ: ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಅಣ್ಣ!

Published : Dec 22, 2024, 12:06 PM IST

ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ‌ ಎಂದು ಗೋಪಾಲ ಕಿರಿಕಿರಿ ತಗೆಯುತ್ತಿದ್ದನಂತೆ. ಅಲ್ಲದೇ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್‌ಅನ್ನು ಪತ್ನಿ ಮನೆಯಲ್ಲಿ ಇರಿಸಿದ್ದನಂತೆ ಗೋಪಾಲ. ತಮ್ಮನ ಕಿರಿಕಿರಿಗೆ ಬೇಸತ್ತು ಬೈಕ್ ಮೇಲೆ ಹೊರಟಿದ್ದ ಗೋಪಾಲ ಮೇಲೆ ಟ್ರ್ಯಾಕ್ಟರ್ ಹರಿಸಿ ಮಾರುತಿ ಕೊಲೆಗೈದಿದ್ದಾನೆ. 
 

ಬೆಳಗಾವಿ(ಡಿ.22):  ಆಸ್ತಿ ವಿವಾದ, ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಸಹೋದರನ್ನ ಅಣ್ಣನೇ ಭೀಕರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ‌ ಜಮೀನಿನಲ್ಲಿ ನಡೆದಿದೆ.  ಯರಗಟ್ಟಿಯ ಗೋಪಾಲ ಬಾವಿಹಾಳ(27) ಹತ್ಯೆಯಾದ ದುರ್ದೈವಿ. ಮಾರುತಿ ಬಾವಿಹಾಳ(30) ತಮ್ಮನನ್ನೇ ಹತ್ಯೆ ಮಾಡಿದ ಪಾಪಿ ಅಣ್ಣನಾಗಿದ್ದಾನೆ. 

ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ‌ ಎಂದು ಗೋಪಾಲ ಕಿರಿಕಿರಿ ತಗೆಯುತ್ತಿದ್ದನಂತೆ. ಅಲ್ಲದೇ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್‌ಅನ್ನು ಪತ್ನಿ ಮನೆಯಲ್ಲಿ ಇರಿಸಿದ್ದನಂತೆ ಗೋಪಾಲ. ತಮ್ಮನ ಕಿರಿಕಿರಿಗೆ ಬೇಸತ್ತು ಬೈಕ್ ಮೇಲೆ ಹೊರಟಿದ್ದ ಗೋಪಾಲ ಮೇಲೆ ಟ್ರ್ಯಾಕ್ಟರ್ ಹರಿಸಿ ಮಾರುತಿ ಕೊಲೆಗೈದಿದ್ದಾನೆ. 

ದಿನಕ್ಕೊಂದು ವಿವಾದ ಆಗ್ತಿದೆ, ಮಂದಿರ- ಮಸೀದಿ ಗದ್ದಲ ಬೇಡ: ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ

ಗೋಪಾಲ ತಂದೆ ಅರ್ಜುನ್‌ ಬಾವಿಹಾಳಗೆ ಮೂವರು ಗಂಡು ಮಕ್ಕಳು. ಕಳೆದ ಹದಿನೈದು ದಿನಗಳ ಹಿಂದಷ್ಟೇ ತಮಗೆ ಬಂದ ಜಮೀನು ಪಾಲು, ಹಣ ಪಡೆದು ಸಹೋದರರು ಬೇರೆ ಬೇರೆಯಾಗಿದ್ದರು. ಮೂವರು ಜನ ಸಹೋದರರಿಗೂ ಒಂದೊಂದು ಟ್ರಾಕ್ಟರ್ ಪಾಲು ಬಂದಿತ್ತು. ಮೃತ ಗೋಪಾಲನಿಗೆ ಬಂದಿದ್ದ ಟ್ರಾಕ್ಟರ್ ಹೆಂಡತಿ ಮನೆಯಲ್ಲಿ ಇಟ್ಟಿದ್ದಕ್ಕೆ ಗಲಾಟೆ ನಡೆದಿತ್ತು. 

ನಾನು ದುಡಿದಿರೋನ್ನ ಹಾಳು ಮಾಡ್ತಿರುವೆ ಎಂದು ಆಗಾಗ್ಗೆ ಇಬ್ಬರು ಸಹೋದರ ನಡುವೆ ಜಗಳ ನಡೆಯುತ್ತಿತ್ತು. ಕುಡಿತದ ದಾಸನಾಗಿದ್ದ ಗೋಪಾಲ ಮನೆಯವರಿಗೂ ಬೇಡಾಗಿದ್ದ, ಟ್ರಾಕ್ಟರ್ ವಿಚಾರಕ್ಕೆ ಇಬ್ಬರು ಸಹೋದರರ ಮಧ್ಯೆ ಬೆಳಗ್ಗೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು ತಮ್ಮನನ್ನು ಕೊಲೆ‌ ಮಾಡಲೆಂದೇ ಮಾರುತಿ ಬಾವಿಹಾಳಹೊಂಚು ಹಾಕಿ ಕುಳಿತಿದ್ದನು. 

ಯರಗಟ್ಟಿ ಹೊರವಲಯದ ಬೂದಿಕೊಪ್ಪ ರಸ್ತೆಯಲ್ಲಿ ಗೋಪಾಲ ಬೈಕ್ ಮೇಲೆ ಬರುವಾಗ ಮಾರುತಿ ಟ್ರಾಕ್ಟರ್ ನಿಂದ ಡಿಕ್ಕಿ ಹೊಡಿದಿದ್ದಾನೆ. ಅವಘಡದಲ್ಲಿ ಜಮೀನಿನಲ್ಲಿ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರಾಕ್ಟರ್ ಹಾಯಿಸಿ ಹತ್ಯೆಗೈದಿದ್ದಾನೆ. ಟ್ರ್ಯಾಕ್ಟರ್ ನಡಿ ಸಿಲುಕಿದ ಭಯಾನಕ ದೃಶ್ಯಗಳನ್ನ ಸ್ಥಳೀಯರು ಮೊಬೈಲ್ ಸೆರೆ ಹಿಡಿದಿದ್ದಾರೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more