ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್‌

ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್‌

Published : Jun 28, 2024, 12:53 PM IST

ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ನಿರೀಕ್ಷಣಾ ಜಾಮೀನು
ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು 
ಹೈಕೋರ್ಟ್ ಏಕಸದಸ್ಯ ಪೀಠದಿಂದ ನಿರೀಕ್ಷಣಾ ಜಾಮೀನು

ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ(Bitcoin Scam Case) ಸಂಬಂಧಿಸಿದಂತೆ ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ(DYSP Sridhar K Pujar) ನಿರೀಕ್ಷಣಾ ಜಾಮೀನು (Anticipatory Bail) ನೀಡಲಾಗಿದೆ. ಹೈಕೋರ್ಟ್‌ನಿಂದ(High court) ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದ್ದು, ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಧರ್ ಪೂಜಾರ್ ಆರೋಪಿಯಾಗಿದ್ದರು. ಬಂಧನದ ವೇಳೆ ಪೊಲೀಸರ ಮೇಲೆಯೇ ಶೀಧರ್ ಕಾರು ಚಲಾಯಿಸಿದ್ದರು. ಹೈಕೋರ್ಟ್ ಏಕಸದಸ್ಯ ಪೀಠದಿಂದ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಪೊಲೀಸರು ತಮ್ಮ ಪ್ರತಿಷ್ಠೆಗಾಗಿ ಕೇಸ್ ದಾಖಲಿಸಿದ್ದಾರೆ. ಒಂದೇ  ಕೇಸ್‌ಗೆ ಎರಡೆರಡು ಬಾರಿ FIR ಮಾಡಿ ತನಿಖೆ ನಡೆಸಲಾಗಿದೆ. ಪ್ರಕರಣ ನಡೆದ 4 ವರ್ಷಗಳ ನಂತರ ಬಂಧಿಸಲು ಯತ್ನಿಸಲಾಗಿದೆ. ಶ್ರೀಧರ್ ಪೂಜಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಪೊಲೀಸರ ಕ್ರಮಕ್ಕೆ ನ್ಯಾ.ಎಂ.ಜಿ. ಉಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರನ್ನು ಮೂರ್ಖರನ್ನಾಗಿಸಲು ಪೊಲೀಸರು ಯತ್ನಿಸಿದಂತಿದೆ. ಇಷ್ಟು ವರ್ಷವಾದರೂ ತನಿಖೆಯಲ್ಲಿ ಪ್ರಗತಿ ಏಕಿಲ್ಲ?,ವಾಟ್ಸ್ ಆಪ್ ಚಾಟ್ ಆಧಾರದಲ್ಲಿ ಕ್ರಮ ಹೇಗೆ ಸಾಧ್ಯ ?, ಹಿಂದಿನ ಆಯುಕ್ತರು, ಜಂಟಿ ಆಯುಕ್ತರು ಮೇಲೇಕೆ ಕೇಸ್ ದಾಖಲಾಗಿಲ್ಲ..? ಎಂದು ಪೊಲೀಸರಿಗೆ ಹೈಕೋರ್ಟ್ ಏಕಸದಸ್ಯ ಪೀಠ ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ವೀಕ್ಷಿಸಿ:  ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನದಗಳಿಕೆಷ್ಟು? ಕಲಿಯುಗದೊಂದಿಗೆ ದ್ವಾಪರ ಯುಗದ ಬೆಸುಗೆ ಈ ‘ಕಲ್ಕಿ’!

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more