ಕವಾಡಿಗಾರಹಟ್ಟಿಗೆ ದಿನೇಶ್ ಗುಂಡೂರಾವ್ ಭೇಟಿ: ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಚೆಕ್ ವಿತರಣೆ

Aug 6, 2023, 11:38 AM IST

ಚಿತ್ರದುರ್ಗ ಕವಾಡಿಗಾರಹಟ್ಟಿ(Kavadigarahatti) ಬಡಾವಣೆಯಲ್ಲಿ ವಿಷ ಜಲ ಜನರ ಜೀವ ಹಿಂಡುತ್ತಲೇ ಇದೆ. ಕಳೆದ 6 ದಿನಗಳಿಂದ ನೀರು ಕೂಡಿದು ಅಸ್ವಸ್ಥರಾದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗ್ರಾಮದಲ್ಲಿ ಆ್ಯಂಬುಲೆನ್ಸ್ ಸೈರನ್ ಕೇಳಿದ್ರೆ ಜನ ಬೆಚ್ಚಿಬೀಳುವಂತಾಗಿದೆ. ವಿಷ ಜಲಕ್ಕೆ ಐವರು ಬಲಿಯಾಗಿದ್ದು ಇಡೀ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ. ಜತೆಗೆ ಅಸ್ವಸ್ಥರ ಸಂಖ್ಯೆ 158ಕ್ಕೆ ಏರಿಕೆಯಾಗಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕವಾಡಿಗಾರಹಟ್ಟಿ ಗ್ರಾಮಕ್ಕೆ ಆರೋಗ್ಯ ಸಚಿವರು ಬರ್ತಾರೆ ಆಂತಾ ಸುದ್ದಿಬೆನ್ನಲ್ಲೇ ನಗರಸಭೆ ಅಲರ್ಟ್ ಆಗಿತ್ತು. ಗ್ರಾಮವನ್ನ ಶುಚಿಗೊಳಿಸಿದ ಸಿಬ್ಬಂದಿ  ಇಡೀ  ಬಡವಾಣೆಗೆ ಔಷಧಿ ಸಿಂಪಡಿಸಿದ್ರು. ಬಳಿಕ ದಿನೇಶ್ ಗುಂಡೂರಾವ್(Dinesh Gundu Rao) ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ 10 ಲಕ್ಷ ಪರಿಹಾರದ ಚೆಕ್(Compensation check) ವಿತರಿಸಿದ್ರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು ಸಂತ್ರಸ್ಥರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ರು. ಈ ವೇಳೆ ಕೆಲ ರೋಗಿಯ ಸಂಬಂಧಿಕರು ಆಸ್ಪತ್ರೆಯಲ್ಲಿ ಎಕ್ಸ್ ರೇ, ಹೆರಿಗೆ ವಾರ್ಡ್‌ನ ಸಿಬ್ಬಂದಿಗಳು ಹಣ ವಸೂಲಿ ಮಾಡ್ತಿದ್ದಾರೆ ಅಂತಾ ದೂರು ಕೊಟ್ರು. ತಕ್ಷಣ ಡಿಎಸ್ ವಿರುದ್ಧ ಗರಂ ಆಗಿ ಜಿಲ್ಲಾ ಸರ್ಜನ್ ಬಸವರಾಜ್‌ನ ಅಮಾನತು ಮಾಡಿದ್ರು.

ಇದನ್ನೂ ವೀಕ್ಷಿಸಿ: ವಿಶ್ವದಾಖಲೆ ವೀರನಿಗೆ ಜೈಲು ಫಿಕ್ಸ್‌!: ಏನದು ತೋಷಖಾನಾ ಪ್ರಕರಣ..?