ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!

ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!

Published : Jul 04, 2025, 03:42 PM IST
ಮದುವೆಯಾಗಿ ಕೇವಲ ೧೫ ದಿನಗಳಲ್ಲೇ ಗಂಡನಿಗೆ ಅಕ್ರಮ ಸಂಬಂಧವಿರುವುದು ಪತ್ನಿಗೆ ತಿಳಿದುಬಂದಿತು. ಆದರೆ ಆತ ಸಂಬಂಧ ಹೊಂದಿದ್ದವಳು ಆಕೆಯ ತಾಯಿಯೇ ಎಂಬ ಅಘಾತಕಾರಿ ಸತ್ಯ ಬಯಲಾಯಿತು. ಈ ವಿಚಿತ್ರ ಘಟನೆಯ ಕರಾಳ ಕಥೆಯನ್ನು ತಿಳಿದುಕೊಳ್ಳಿ.

ಅವರಿಬ್ಬರು ನವದಂಪತಿಗಳು. ಮದುವೆಯಾಗಿ 15 ದಿನಗಳಾಗಿದ್ವಷ್ಟೇ... ಸಂಬಂಧಿಕನನ್ನೇ ನೋಡಿ ಹೆತ್ತವರು ಮದುವೆ ಮಾಡಿಕೊಟ್ಟಿದ್ರು. ಆದ್ರೆ ಮದುವೆಯಾಗಿ ಗಂಡನ ಮನೆ ಸೇರಿದ ಆ ಹೆಣ್ಣುಮಗಳಿಗೆ 15 ದಿನದಲ್ಲೇ ಗಂಡನಿಗೆ ಅಫೇರ್​​ ಇರೋದು ಗೊತ್ತಾಗಿತ್ತು. ಜೋರು ಜಗಳ ಮಾಡಿದ್ಲು. ಆದ್ರೆ ಆ ಅಫೇರ್​​ ಬಗ್ಗೆ ಕೆಣಕಿದಾಗ ಆ ಹೆಣ್ಣುಮಗಳಿಗೆ ಜೀವಮಾನದ ಶಾಕ್​ ಸಿಕ್ಕಿತ್ತು.. ಕಾರಣ ಗಂಡ ಅಫೇರ್​​​ ಇಟ್ಟುಕೊಂಡಿದ್ದಿದ್ದು ಯಾರ ಜೊತೆ ಗೊತ್ತಾ..? ಆಕೆಯ ಅಮ್ಮನ ಜೊತೆ... ಯಸ್​​ ಅಳಿಯ ಮತ್ತು ಅತ್ತೆ ನಡುವೆ ಅಲ್ಲಿ ಲವ್ವಿಡವ್ವಿ ನಡೆದಿರೋದು ಪಸರ್​ ಆಗಿಬಿಟ್ಟಿತ್ತು.. ಅಷ್ಟಕ್ಕೂ ಏನಿದು ಫ್ಯಾಮಿಲಿ ಡ್ರಾಮ..? ಯಾರು ಆ ಅಳಿಯ ಮತ್ತು ಅತ್ತೆ. ಒಂದು ವಿಚಿತ್ರ ಕೌಟುಂಬಿಕ ಕಲಹದ ಕಥೆಯೇ ಇವತ್ತಿನ ಎಫ್​.ಐ.ಆರ್​​.

ನೂರಾರು ಕನಸು ಕಟ್ಟಿಕೊಂಡು ಗಂಡನ ಮನೆಗೆ ಹೋದವಳಿಗೆ ಕಂಡಿದ್ದು ಗಂಡ ಮತ್ತು ತಾಯಿಯ ಅಕ್ರಮ ಸಂಬಂಧ.. ಆತ ಕಳಿಸಿದ್ದ ಅಶ್ಲೀಲ ಮೆಸೆಜ್​ಗಳನ್ನ ಆಕೆ ತನ್ನ ತಂದೆಗೆ ಕಳುಹಿಸುವ ಪ್ರಯತ್ನ ಮಾಡಿದ್ಲು.. ಆದ್ರೆ ಆಷ್ಟೊತ್ತಿಗೆ ಆ ಕಿರಾತಕ ಅವಳನ್ನ ಬೆದರಿಸಿ ಮೊಬೈಲ್​ ಕಿತ್ತುಕೊಂಡು ಹೋಗಿದ್ದ.. ನಂತರ ಪಂಚಾಯ್ತಿಗೆ ಹೋಗೋಣ ಅಂತ ಕರೆದುಕೊಂಡು ಹೋಗಿ ಆಕೆಯನ್ನ ನಡುದಾರಿಯಲ್ಲಿ ಬಿಟ್ಟು ಎಸ್ಕೇಪ್​ ಆಗಿದ್ದ.. ತಂದೆಗೆ ಕಾಲ್​ ಮಾಡಿದ್ರೆ ಅವನದ್ದು ಒಂದು ರೀತಿಯ ಗೋಳು.. ಅಲ್ಲಿ ಹೆಂಡತಿ ಕೂಡ ಎಸ್ಕೇಪ್​ ಆಗಿದ್ಲು.. ಅತ್ತ ಗಂಡ.. ಇತ್ತ ಅಮ್ಮ ಇಬ್ಬರೂ ನಾಪತ್ತೆ.. ಇಬ್ಬರೂ ಊರೇ ಬಿಟ್ಟಿದ್ರು.. ಪೊಲೀಸರ ಬಳಿ ಹೋದ್ರೂ ಪ್ರಯೋಜನವಾಗೊಲ್ಲ.. ಆದ್ರೆ ಯಾವಾಗ ಟಿವಿ ಚಾನಲ್​ಗಳಲ್ಲಿ ಸುದ್ದಿ ಬಂತೋ ಆ ತಾಯಿ ಓಡೋಡಿ ಬಂದಿದ್ಲು... ನಾನೇ ಕರೆಕ್ಟು ಅಂದಿದ್ಲು.

ಅಳಿಯ ಗಣೇಶ್​​ ಪತ್ತೆಯಾದ ಬಳಿಕ ಈ ಪ್ರಕರಣ ಇನ್ಯಾವ ತಿರುವು ಪಡೆದುಕೊಳ್ಳುತ್ತೋ ಗೊತ್ತಿಲ್ಲ. ಆದ್ರೆ ದೇವರಂತೆ ಕಾಣಬೇಕಿದ್ದ ಅತ್ತೆಯ ಜೊತೆಯೇ ಈ ಕಿರಾತಕ ಅಕ್ರಮ ಸಂಬಂಧ ಬೆಳಸಿದ್ದಾನಂದ್ರೆ ಈತನಿಗೆ ಏನಂಥ ಕರೆಯಬೇಕೋ ಗೊತ್ತಿಲ್ಲ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more