ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶದಲ್ಲಿ ದರ್ಶನ್‌ ಗ್ಯಾಂಗ್‌: ಪೊಲೀಸರು ಕೊಟ್ಟ ಆ 6 ಕಾರಣಗಳೇನು?

Jun 17, 2024, 5:15 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್(Darshan) ಸೇರಿದಂತೆ 15 ಆರೋಪಿಗಳನ್ನು ನ್ಯಾಯಾಲಯದ ಆದೇಶ ಮೇರೆಗೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ತಿಂಗಳ 20ರವರೆಗೆ ದರ್ಶನ್‌ ಮತ್ತು ಗ್ಯಾಂಗ್‌ ಪೊಲೀಸ್‌ ಕಸ್ಟಡಿಯಲ್ಲಿ ಇರಲಿದೆ. ಪೊಲೀಸರು ಒಂಬತ್ತು ದಿನ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಕೇಳಿದ್ದರು. ಆದ್ರೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌(Magistrate Court) 9 ದಿನಗಳ ಬದಲಾಗಿ 5 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ. ನಟ ದರ್ಶನ್‌ ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡ್ತಿಲ್ಲ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆಗೆ ಪ್ರಮುಖ ಕಾರಣ ಆತನ ಪವಿತ್ರಾ ಗೌಡಗೆ(Pavithra Gowda) ಕೆಟ್ಟದಾಗಿ ಮೆಸೇಜ್‌ ಮಾಡ್ತಿದ್ದ ಎಂಬುದಾಗಿದೆ.

ಇದನ್ನೂ ವೀಕ್ಷಿಸಿ:  ದರ್ಶನ್, ಪವಿತ್ರಾ ಗೌಡ ವಿರುದ್ಧ ಪ್ರಬಲ ಸಾಕ್ಷ್ಯ ಸಂಗ್ರಹ: 10ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ ಪಡೆದ ತನಿಖಾಧಿಕಾರಿಗಳು!