Jun 21, 2024, 1:38 PM IST
ಪೊಲೀಸ್ ಕಾನ್‌ಸ್ಟೇಬಲ್(Police constable) ಮೇಲೆ ದರ್ಶನ್(Darshan) ಗ್ಯಾಂಗ್ ಹಲ್ಲೆ(Attack)ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ಪೇದೆ ಮೇಲೆ ಹಲ್ಲೆ ನಡೆಸಿದ್ದಾರಂತೆ. ಕಾನ್‌ಸ್ಟೇಬಲ್ ನಾಗೇಶ್ ದೂರು ನೀಡಿದ್ರೂ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎನ್ನಲಾಗ್ತಿದೆ. ದೂರು ಕೊಟ್ಟರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎನ್ನಲಾಗ್ತಿದೆ. ಮೇಲಾಧಿಕಾರಿಗಳ ನಡೆಗೆ ಬೇಸತ್ತಿದ್ದ ಕಾನ್‌ಸ್ಟೇಬಲ್ ನಾಗೇಶ್, ಕೊನೆಗೆ ಗನ್ ಮ್ಯಾನ್ ಹುದ್ದೆಯಿಂದಲೇ ವಿಮುಕ್ತಿ ಪಡೆದಿದ್ದಾರೆ. ಮದ್ದೂರು ಶಾಸಕ ಉದಯ್ ಗೌಡ ಗನ್ ಮ್ಯಾನ್ ಆಗಿದ್ದರು. ಏಪ್ರಿಲ್ 22ರಂದು ಮಂಡ್ಯದಲ್ಲಿ(Mandya) ನಡೆದಿದ್ದ ದರ್ಶನ್ ಆಪ್ತರ ಅಟ್ಟಹಾಸ. ಮದ್ದೂರು ಶಾಸಕ ಕದಲೂರು ಉದಯ್ ಗನ್ ಮ್ಯಾನ್ ಆಗಿದ್ದ ನಾಗೇಶ್. ಮುಖಂಡರನ್ನ ಹತ್ತಿರಕ್ಕೆ ಬಿಟ್ಟು ಕೊಳ್ಳುವ ವಿಚಾರಕ್ಕೆ ನಾಗೇಶ್ ಜತೆ ಜಗಳವಾಗಿದೆ. ಕ್ಯಾಂಪೇನ್ ಮುಗಿದ ಬಳಿಕ ಶಾಸಕ ಉದಯ್ ಮನೆಯಲ್ಲೇ ನಾಗೇಶ್‌ಗೆ ಹಲ್ಲೆ. ಪೇದೆ ನಾಗೇಶ್ ಮೇಲೆ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಹಲ್ಲೆ ಮಾಡಿದ್ದಾನಂತೆ.
ಇದನ್ನೂ ವೀಕ್ಷಿಸಿ: ನನ್ನ ರಾಜಕೀಯ ಅಂತ್ಯ ತೀರ್ಮಾನಿಸೋದು ಜನ: ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಡಿಕೆಶಿ ತಿರುಗೇಟು