Jan 13, 2023, 12:03 PM IST
ಅವಲಹಳ್ಳಿಯ ಶಾಂತಿನಿವಾಸ ಲೇಔಟ್'ನಲ್ಲಿದ್ದ ಬಂಗಲೆಗೆ ದರೋಡೆಕೋರರು ನುಗ್ಗಿದ್ದರು. ಮನೆಗೆ ಯಾರೋ ಎಂಟ್ರಿಯಾಗಿದ್ದಾರೆಂದು ಮೊಬೈಲ್'ನಲ್ಲಿ ಸಿಸಿಟಿವಿ ನೋಡ್ತಿದ್ದಂತೆ ಮನೆಯ ಮೂಲೆ ಮೂಲೆಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ರಾಬರ್ಸ್ ನಿಂತಿದ್ದು ಕಂಡಿತ್ತು. ಕೂಡ್ಲೇ ಎಚ್ಚೆತ್ತ ಹುಡುಗ ಮೆಲ್ಲಗೆ ದರೋಡೆಕೋರರು ಒಂದು ಕೋಣೆಗೆ ಹೋಗೊದಕ್ಕೆ ವೇಯ್ಟಿಂಗ್ ಮಾಡಿ, ಬಳಿಕ ಮೂವರು ದರೋಡೆಕೋರರನ್ನ ರೂಂ ನಲ್ಲಿ ಕೂಡಿಹಾಕಿ ಡೋರ್ ಲಾಕ್ ಮಾಡಿದ್ದಾನೆ. ಬಳಿಕ 112 ಗೆ ಕರೆ ಮಾಡಿದ್ದಾನೆ. ಹತ್ತು ನಿಮಿಷಗಳಲ್ಲಿ ಸ್ಥಳಕ್ಕೆ ತಲಘಟ್ಟಪುರ ಪೊಲೀಸ್ರು ದೌಡಾಯಿಸಿದ್ದು, ಮನೆ ಸುತ್ತುವರೆದು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಮಾಹಿತಿ ಮೇರೆಗೆ ಸಧ್ಯ ಏಳು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.