ಮಹದೇವಯ್ಯ ಕೊಲೆಯ ರಹಸ್ಯ ಬಯಲು..! ಆಳಾಗಿದ್ದವನೇ ಅರಸನ ಕತ್ತು ಕೊಯ್ದುಬಿಟ್ಟಿದ್ದ..?

ಮಹದೇವಯ್ಯ ಕೊಲೆಯ ರಹಸ್ಯ ಬಯಲು..! ಆಳಾಗಿದ್ದವನೇ ಅರಸನ ಕತ್ತು ಕೊಯ್ದುಬಿಟ್ಟಿದ್ದ..?

Published : Dec 16, 2023, 02:21 PM IST

ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ದರು..!
7 ಕೋಟಿ ಹಣಕ್ಕೆ ಬಂದವರಿಗೆ ಸಿಕ್ಕಿಬೀಳೋ ಭಯ ಕಾಡಿತ್ತು..!
ಮಹದೇವಯ್ಯರ ಹೆಣ ಹಾಕಿ ಅವರದ್ದೇ ಕಾರಲ್ಲಿ ಹೊತ್ತೊಯ್ದಿದ್ರು!

ಅವರು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ರವರ(CP Yogeshwar) ಬಾವ. ಮಹದೇವಯ್ಯ ಕಿಡ್ನ್ಯಾಪ್(Kidnapped) ಆಗಿ ನಂತರ ಹೆಣವಾಗಿ ಸಿಕ್ಕಿ ಇಂದಿಗೆ 15 ದಿನಗಳಾಯ್ತು. ಆದ್ರೆ ಇದುವರೆಗೂ ಅವರ ಕಿಡ್ನ್ಯಾಪ್ ಮಾಡಿ, ಕೊಂದಿದ್ಯಾರು ಅನ್ನೋದು ಮಾತ್ರ ನಿಗೂಢವಾಗೇ ಇತ್ತು. ಆದ್ರೆ ಇವತ್ತು ಮಹದೇವಯ್ಯರ ಕಿಡ್ನ್ಯಾಪ್ ಮತ್ತು ಕೊಲೆ(Murder) ರಹಸ್ಯ ಬಯಲಾಗಿದೆ. ನಿರಂತರವಾಗಿ ಈ ಕೇಸ್‌ನ ಹಿಂದೆ ಬಿದ್ದಿದ್ದ ರಾಮನಗರ(Ramanagar) ಪೊಲೀಸರು ಕೊನೆಗೂ  ಹಂತಕರ ಬೇಟೆಯಾಡಿದ್ದಾರೆ. ಅಷ್ಟೇ ಅಲ್ಲ ಕೊಲೆಯ ಹಿಂದಿನ ರಹಸ್ಯವನ್ನ ಭೇದಿಸಿದ್ದಾರೆ. ಯಾವಾಗ ಪೊಲೀಸರು ಮಹದೇಶ್ವರ ಬೆಟ್ಟಕ್ಕೆ ಹೋಗಿ ದೇವಸ್ಥಾನದ ಸಿಸಿ ಟಿವಿ ಫೂಟೇಜ್‌ಗಳನ್ನ ಪರಿಶೀಲಿಸುತ್ತಾರೋ ಆಗ ಒಬ್ಬನ ಮೇಲೆ ಅನುಮಾನ ಬರುತ್ತೆ. ಆತ ಸಿ.ಪಿ ಯೋಗೇಶ್ವರ್‌ರ ಸಹೋದರನ ಜಮೀನಿನಲ್ಲಿ ಕೂಲಿ ಕಾರ್ಮಿಕ. ಸೋ ಅವನೇ ಮಹದೇವಯ್ಯರನ್ನ ಕೊಲೆ ಮಾಡಿರಬಹುದು ಅಂತ ಶಂಕಿಸಿ ಆತನ ಹಿಂದೆ ಬೀಳ್ತಾರೆ. ಆದ್ರೆ ಆ ಕೂಲಿ ಅಷ್ಟರಲ್ಲಾಗಲೇ ಊರು ಖಾಲಿ ಮಾಡಿದ್ದ. ನಿನ್ನೆ ಮಹದೇವಯ್ಯರ ಕಾರ್ಯ ಇತ್ತು. ಆ ದಿನವೇ ಮಹದೇವಯ್ಯರನ್ನ ಕೊಂದು ಮುಗಿಸಿದವರು ಪೊಲೀಸರ ಅತಿಥಿಯಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನೂ ಅವರನ್ನ ಕೊಂದಿದ್ದು ತಮ್ಮದೇ ಬಾಮೈದುನನ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಆಳು ಅನ್ನೋ ಮಾಹಿತಿ. ವರ್ಷಗಟ್ಟಲೇ ತಮ್ಮದೇ ಜಮೀನಿನಲ್ಲಿ ಕೆಲಸ ಮಾಡ್ತಿದ್ದವನಿಗೆ ಮಹದೇವಯ್ಯರ ತೋಟದ ಮನೆಯ ತಿಜೋರಿಯ ಮೇಲೆ ಕಣ್ಣುಬಿದ್ದಿತ್ತು. ಯಾವಾಗ ಮಹದೇವಯ್ಯ ಇತ್ತಿಚೆಗಷ್ಟೇ 7 ಕೋಟಿಯ ಪ್ರಾಪರ್ಟಿ ಮಾರಿದ್ದಾರೆ ಹಣವೆಲ್ಲಾ ತಮ್ಮ ತೋಟದ ಮನೆಯಲ್ಲೇ ಇಟ್ಟಿದ್ದಾರೆ ಅನ್ನೋ ಸುದ್ದಿ ಬಂತೋ ಆ ಕೂಲಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮಹದೇವಯ್ಯರ ಮನೆಗೆ ನುಗ್ಗೇಬಿಟ್ಟ. ಆದ್ರೆ ಅವನ ದುರಾದೃಷ್ಟ ಮಹದೇವಯ್ಯ ಏಳೂ ಕೋಟಿಯನ್ನ ಬ್ಯಾಂಕ್‌ನಲ್ಲಿ ಇಟ್ಟಿದ್ರು. ಪೊಲೀಸರು ಅಧಿಕೃತವಾಗಿ ಮುರಗನೇ ಮರ್ಡರರ್ ಅನ್ನೋದನ್ನ ಹೇಳೋ ತನಕ ಇದು ಕೇವಲ ಆರೋಪ ಅಂತಷ್ಟೇ ಹೇಳಬಹುದು. ಆದ್ರೆ ಮೂಲಗಳ ಪ್ರಕಾರ 7 ಕೋಟಿ ಆಸೆಗೆ ಬಿದ್ದ ಮುರುಗ ಆ್ಯಂಡ್ ಫ್ರೆಂಡ್ಸ್ ಅನ್ನ ಹಾಕಿದ ಧಣಿಯನ್ನೇ ಮುಗಿಸಿದ್ದಾನೆ.

ಇದನ್ನೂ ವೀಕ್ಷಿಸಿ:  ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ 'ಹನಿ' ಗ್ಯಾಂಗ್‌: ಗಂಡ-ಹೆಂಡತಿ ಹನಿಟ್ರ್ಯಾಪ್‌ಗೆ ಉದ್ಯಮಿ ವಿಲವಿಲ!

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?