Cover Story: ಆಸ್ಪತ್ರೆಗಳಲ್ಲಿ ಭ್ರಷ್ಟರ ಕೂಪ, ಬಡವರ ಔಷಧ ಖಾಸಗಿಯವರ ಪಾಲು?

Jun 18, 2022, 6:30 PM IST

ಬೆಂಗಳೂರು (ಜೂನ್ 18): ಆಸ್ಪತ್ರೆ (Hospitals) ಅಂದಾಗ ಬಡವರ ಪಾಲಿಗೆ ಆಸರೆ ಅನ್ನೋದೇ ಸರ್ಕಾರಿ ಆಸ್ಪತ್ರೆಗಳು (Government Hospitals). ಸರ್ಕಾರಗಳು ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ನೀಡಲು ಶ್ರಮವಹಿಸುತ್ತಿದೆ. ಆದರೆ, ಭಷ್ಟರ ಕೂಪ ಇದಕ್ಕೆ ಬಿಡಬೇಕಲ್ಲ. ಜನಸಾಮಾನ್ಯರಿಗಾಗಿ ಇರುವ ಔಷಧಿಗಳನ್ನು(medicine ) ಖಾಸಗಿ ಆಸ್ಪತ್ರೆಗಳು (private hospital) ಹಾಗೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವ ದಂಧೆಗೆ ಇಳಿದಿದೆ.

ಇದು ಬೆಂಗಳೂರಿನ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ(victoria hospital) ನಡೆಯುತ್ತಿರುವ ಅವ್ಯವಹಾರದ ಕುರಿತಾಗಿ ಇರುವುದಾಗಿದೆ. ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಕಾರಣ, ಸಾಕಷ್ಟು ಅಕ್ರಮಗಳಿಗೂ ಈ ಆಸ್ಪತ್ರೆ ನೆಲೆಯಾಗಿದೆ. ಅಂಥದ್ದೊಂದು ಪತ್ರ ಕವರ್ ಸ್ಟೋರಿ ತಂಡಕ್ಕೆ ಬಂದಾಗ, ಇದರ ಸಂಪೂರ್ಣ ಮಾಹಿತಿ ಅರಸಿ ಹೋದಾಗ ಸಿಕ್ಕಿದ್ದು, ಭಯಾನಕ ಸತ್ಯಗಳು.

Bengalur: ದಿ ಪಾರ್ಕ್ ಹೊಟೇಲ್ ಡ್ರಗ್ಸ್ ಪಾರ್ಟಿ: ಮತ್ತಷ್ಟು ವಿದೇಶಿಗರು ವಶಕ್ಕೆ

ಇಲ್ಲಿನ ಆಸ್ಪತ್ರೆಗಳ ವೈದ್ಯರು, ಆಸ್ಪತ್ರೆಯ ಸಮಯದಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಅದರಲ್ಲೂ ಇಲ್ಲಿನ ಸರ್ಕಾರಿ ಫಾರ್ಮಸಿಯಿಂದ ವಾರದ ಕೊನೆಯ ದಿನಗಳಲ್ಲಿ ಅಕ್ರಮವಾಗಿ ಮೆಡಿಸಿನ್‌ಗಳನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಮೆಡಿಕಲ್ ಶಾಪ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.