ಪೋಕ್ಸೋ ಪ್ರಕರಣ, ಸಿಐಡಿ ಅಧಿಕಾರಿಗಳಿಂದ ಯಡಿಯೂರಪ್ಪಗೆ ನೋಟಿಸ್

Jun 12, 2024, 7:06 PM IST

ಮಾಜಿ ಸಿಎಂ ಯಡಿಯೂರಪ್ಪ ಪೋಕ್ಸೋ ಕೇಸ್ ಸಂಬಂಧ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.  ವಕೀಲರ ‌ಮೂಲಕ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಇದಾಗಿದ್ದು, ಸಿಐಡಿ ಗೆ ವರ್ಗಾವಣೆ ಆಗಿದ್ದು ತನಿಖೆ ನಡೆಯುತ್ತಿದೆ.

ರೇಣುಕಾಸ್ವಾಮಿ ಕೊಲೆ ಆರೋಪಿಗಳು 13ರಲ್ಲ 17 ಮಂದಿ, ನಾಪತ್ತೆಯಾದವರ ಪೈಕಿ ಇನ್ನೂ ಒಬ್ಬಳಿದ್ದಾಳೆ ಕಿಲಾ(ಲೇ)ಡಿ?

ಇನ್ನು ದೂರುದಾರ ಮಹಿಳೆ ಸಹೋದರನಿಂದ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಶಶಾಂಕ್ ಸಿಂಗ್ ಎಂಬುವವರಿಂದ ಅರ್ಜಿ ಸಲ್ಲಿಕೆಯಾಗಿದೆ. ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸರಿಯಾದ ರೀತಿ ಪ್ರಕರಣದ ತನಿಖೆ ಮಾಡುವಂತೆ ಮನವಿ ಮಾಡಲಾಗಿದೆ. ಕೋರ್ಟ್ ಗೆ ಟೆಕ್ನಿಕಲ್‌ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಲು ಮನವಿ ಜೊತೆಗೆ ತನಿಖೆಯ ಪ್ರಗತಿ ವರದಿ ಸಲ್ಲಿಸಲು ಸೂಚಿಸಲು ಅರ್ಜಿ ಸಲ್ಲಿಕೆಯಾಗಿದೆ. ವಕೀಲ ಬಾಲನ್ ಅವರಿಂದ ಹೈಕೋರ್ಟ್ ಗೆ ಅರ್ಜಿಕೆಯಾಗಿದೆ. ಸಿಐಡಿ, ಬೆಂಗಳೂರು ಪೊಲೀಸ್ ಆಯುಕ್ತರು, ಗೃಹ ಇಲಾಖೆ ಹಾಗೂ ಯಡಿಯೂರಪ್ಪ ಪ್ರತಿವಾದಿ ಮಾಡಿ ಅರ್ಜಿ ಸಲ್ಲಿಕೆ ಯಾಗಿದೆ.