Suraj Revanna sexual abuse case: ಸೂರಜ್ ರೇವಣ್ಣ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ CID ನೀಡಿದ ಕಾರಣಗಳೇನು..?

Jun 25, 2024, 12:54 PM IST

ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ(Suraj Revanna sexual abuse case) ಸಿಐಡಿ ಕಸ್ಟಡಿಯಲ್ಲಿ ಇದೆ. ಇದಕ್ಕೆ ಸಿಐಡಿ(CID) ಕೋರ್ಟ್‌ಗೆ ನೀಡಿದ ಕಾರಣಗಳು ಹೀಗಿವೆ.. ಆರೋಪಿಯೊಂದಿಗೆ ಸ್ಥಳ ಗರುತಿಸಿ ಪಂಚನಾಮೆ ಮಾಡಬೇಕು, ಕೃತ್ಯ ನಡೆದ ಸ್ಥಳವು ಹಾಸನ(Hassan) ಜಿಲ್ಲೆಯ ವ್ಯಾಪ್ತಿಗೆ ಬರುತ್ತೆ, ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ತನಿಖೆ ಮಾಡಬೇಕು, ವೈದ್ಯಕೀಯ ಪರೀಕ್ಷೆಗೊಳಪಡಿಸಿ ವರದಿ ಸಂಗ್ರಹ ಮಾಡಬೇಕಿದೆ. ಸೂರಜ್ ಹೇಳಿಕೆ ಮೇರೆಗೆ ಆರೋಪಿ ಶಿವಕುಮಾರ್(Shivakumar) ಪತ್ತೆ ಹಚ್ಚಬೇಕು, ಆರೋಪಿಗಳ ಮೊಬೈಲ್ ಹಾಗೂ ಸಿಸಿಟಿವಿ ಸಂಗ್ರಹ ಮಾಡಬೇಕಿದೆ ಎಂದು ಸಿಐಡಿ ಹೇಳಿದೆ. ಕೃತ್ಯವೆಸಗಿದ ವಾಹನಗಳನ್ನು ಪತ್ತೆ ಮಾಡಿ ಜಪ್ತಿ ಪಡಿಸಬೇಕಿದೆ. ಆರೋಪಿ ಧರಿಸಿದ್ದ ಉಡುಪುಗಳನ್ನು ಪರೀಕ್ಷೆಗೆ ಒಳಪಡಿಸಬೇಕು, ಆರೋಪಿ ದೂರುದಾರನಿಗೆ ಬೆದರಿಕೆ ಹಾಕಿದ್ದು ಎಲ್ಲಿ..? ಆರೋಪಿ ಪಂಚನಾಮೆ ನಡೆಸಿ ಸಾಕ್ಷಿ ಹೇಳಿಕೆ ಪಡೆಯಬೇಕು, ಆರೋಪಿ ಎಸಗಿರುವ ಕೃತ್ಯ ಸಮಾಜದಲ್ಲಿ ತಲೆ ತಗ್ಗಿಸುವ ಕೃತ್ಯವಾಗಿದೆ. ಹಾಗಾಗಿ ಸೂರಜ್ ರೇವಣ್ಣರನ್ನು ಕಸ್ಟಡಿಗೆ ನೀಡುವಂತೆ ಸಿಐಡಿ ಮನವಿ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಈ ಆದೇಶ ಹೊರಡಿಸಲಾಗಿದ್ದು, 42 ನೇ ಎಸಿಎಂಎಂ ಕೋರ್ಟ್ ನ್ಯಾ.ಶಿವಕುಮಾರ್ ರಿಂದ ಆದೇಶ ಹೊರಡಿಸಲಾಗಿದೆ.

ಇದನ್ನೂ ವೀಕ್ಷಿಸಿ:  ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆ, ಯುವ ಜನತೆ ಈ ಹೇರಿಕೆಗಳಿಗೆ ಬೆದರೋದಿಲ್ಲ: ಪ್ರಧಾನಿ ಮೋದಿ