
ಆಸ್ತಿ ಹಾಗೂ ಕಂಪನಿ ಶೇರ್‌ಗಾಗಿ ಮಕ್ಕಳೇ ತಂದೆಯನ್ನು ಗೃಹ ಬಂಧನದಲ್ಲಿ ಇಟ್ಟಿದ್ದಾರೆ.
ಆಸ್ತಿಗಾಗಿ ತಂದೆಯನ್ನೇ ಪಾಪಿ ಮಕ್ಕಳು ಗೃಹ ಬಂಧನದಲ್ಲಿಟ್ಟಿದ್ದಾರೆ. ತಂದೆಯನ್ನ ಗೃಹ ಬಂಧನದಲ್ಲಿ(House Arrest)ಇಡಲಾಗಿದೆ ಎಂದು ಸಹೋದರಿಯ ವಿರುದ್ಧ ಸಹೋದರ ದೂರು ನೀಡಿದ್ದಾನೆ. ನಿರ್ಮಾಣ್ ಶೆಲ್ಟರ್ಸ್ ಪ್ರೈ.ಲಿ. ಕಂಪನಿ ಮಾಲೀಕರ ಲಕ್ಷ್ಮೀ ನಾರಾಯಣ್(77) ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತಂದೆ ಕಟ್ಟಿಬೆಳೆಸಿದ ಕಂಪನಿ ಹಾಗೂ ಶೇರ್ಸ್‌ಗಾಗಿ ಈ ಕುಕೃತ್ಯ ಮಾಡಲಾಗಿದೆ ಎಂದು ಪೊಲೀಸರಿಗೆ(Police) ದೂರು ನೀಡಲಾಗಿದೆ. ಲಕ್ಷ್ಮೀ ನಾರಾಯಣ್ ಪುತ್ರ ಭರತ್ ರಾಜ್ರಿಂದ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರಿ ತೇಜವತಿ ಹಾಗೂ ತಂದೆಯ ಸಹೋದರಿ ಪ್ರೇಮಾಜವರೇಗೌಡ, ನಿರ್ಮಾಣ್ ಶೆಲ್ಟರ್ಸ್ ಪ್ರೈ.ಲಿ ಉದ್ಯೋಗಿ ಚೌಡರೆಡ್ಡಿ, ಮೋಹನ್ ವಿರುದ್ಧವೂ ಕೇಸ್ ದಾಖಲಿಸಿದ್ದು, ಎಫ್ಐಆರ್ ದಾಖಲಿಸಿಕೊಂಡು ಸಿದ್ದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Narendra Modi: ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಭೇಟಿ: 2 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ !