ಬಿಜೆಪಿ ಸಂಸದ ಪುತ್ರನ ವಿರುದ್ಧ ವಂಚನೆ ಆರೋಪ! ಮದುವೆ ಹೆಸರಲ್ಲಿ ನಂಬಿಸಿ ಕೈಕೊಟ್ಟನಾ ?

ಬಿಜೆಪಿ ಸಂಸದ ಪುತ್ರನ ವಿರುದ್ಧ ವಂಚನೆ ಆರೋಪ! ಮದುವೆ ಹೆಸರಲ್ಲಿ ನಂಬಿಸಿ ಕೈಕೊಟ್ಟನಾ ?

Published : Nov 17, 2023, 12:03 PM ISTUpdated : Nov 17, 2023, 12:29 PM IST

ದೇವೇಂದ್ರಪ ಪುತ್ರನ ವಿರುದ್ಧ ದೂರು ನೀಡಿದ್ದ ಯುವತಿ
ಯುವತಿಯ ವಿರುದ್ಧ ರಂಗನಾಥ್ ಕೂಡ ದೂರು ಸಲ್ಲಿಕೆ
ಮೈಸೂರಿನಲ್ಲಿ ಮಹಿಳೆಯಿಂದ ಬ್ಲ್ಯಾಕ್ ಮೇಲ್ ಆರೋಪ

ಬಳ್ಳಾರಿ ಎಂ.ಪಿ. ದೇವೇಂದ್ರಪ್ಪ(MP Devendrappa) ಮಗನ ವಿರುದ್ಧ ಲವ್, ಸೆಕ್ಸ್, ದೋಖಾ ಮಾಡಿರುವ ಆರೋಪವನ್ನು ಯುವತಿ(Woman) ಮಾಡಿದ್ದಾಳೆ. ದೇವೆಂದ್ರಪ್ಪ ಮಗ ರಂಗನಾಥ್(Ranganath) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು(Bengaluru) ಮೂಲದ ಯುವತಿಗೆ ವಂಚನೆ ಮಾಡಿದ್ದಾರೆ ಎನ್ನಲಾಗ್ತಿದೆ. ಮೈಸೂರಿನಲ್ಲಿ(Mysore) ರಂಗನಾಥ್‌ ಲೆಕ್ಚರರ್ ಆಗಿದ್ದು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಂತ್ರಸ್ತೆಗೆ ರಂಗನಾಥ್ ಪರಿಚಯವಾಗಿದ್ದಾರೆ ಎನ್ನಲಾಗ್ತಿದೆ. ಸ್ನೇಹಿತರ ಮೂಲಕ ರಂಗನಾಥ ಪರಿಚಯವಾಗಿತ್ತು. 42 ವರ್ಷದ ರಂಗನಾಥ್‌ಗೆ 24 ವರ್ಷದ ಯುವತಿಗೆ ಜೊತೆ ಲವ್ ಇತ್ತು ಎನ್ನಲಾಗ್ತಿದೆ.

ಪಾರ್ಟಿ ಒಂದ್ರಲ್ಲಿ ಸಂತ್ರಸ್ತೆಯ ಪರಿಚಯ ಮಾಡಿಕೊಂಡು, ಕಳೆದ ಜನವರಿಯಲ್ಲೇ ಮೈಸೂರಿನ ಹೋಟೆಲ್‌ನಲ್ಲಿ ಲೈಂಗಿಕ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಕೆಲ ಕಾಲ ಈ ಜೋಡಿ ಚೆನ್ನಾಗಿ ಇತ್ತು ಎನ್ನಲಾಗ್ತಿದ್ದು, ಮದ್ವೆ ಆಗುವಂತೆ ಯುವತಿ ಕೇಳಿದ್ದಾಳೆ. ಈ ವೇಳೆ ಸಂತ್ರಸ್ತೆಯನ್ನು ಅವೈಡ್ ಮಾಡೋಕೆ ರಂಗನಾಥ್ ಶುರು ಮಾಡಿದ್ದಾರೆ. ಬಳಿಕ ರಂಗನಾಥ್ ವಿಚಾರವನ್ನು ದೇವೆಂದ್ರಪ್ಪ ಗಮನಕ್ಕೆ ಯುವತಿ ತಂದಾಗ, ಯುವತಿ ವಿರುದ್ಧ ಬಿಜೆಪಿ ಸಂಸದ ದೇವೇಂದ್ರಪ್ಪ ಗರಂ ಆಗಿದ್ದಾರೆ ಎನ್ನಲಾಗ್ತಿದೆ. ಬಳಿಕ ಬೇರೆ ದಾರಿ ಕಾಣದೇ ಬಸವನಗುಡಿ ಮಹಿಳಾ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದು, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸದ್ಯ ಸಂತ್ರಸ್ಥೆ ಹಾಗೂ ರಂಗನಾಥ್‌ಗೆ ಬಸವನಗುಡಿ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಆದ್ರೆ ಇದುವರೆಗೂ  ರಂಗನಾಥ್ ಹಾಗೂ ಸಂತ್ರಸ್ತೆ ವಿಚಾರಣೆಗೆ ಹಾಜರಾಗಿಲ್ಲ. ಇತ್ತ ರಂಗನಾಥ್ ನಿಂದಲೂ ಯಾವುದೇ ಮಾಹಿತಿಯಿಲ್ಲ. ಹಾಗಾಗಿ
ಬಸವನಗುಡಿ ಮಹಿಳಾ ಪೊಲೀಸರಿಂದ ತನಿಖೆ ಮುಂದುವರೆದಿದೆ.  

ಇದನ್ನೂ ವೀಕ್ಷಿಸಿ:  ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ