ಮುಸ್ಲಿಮರ ರಕ್ಷಣೆಯೇ ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ: ಚಕ್ರವರ್ತಿ ಸೂಲಿಬೆಲೆ

Oct 2, 2023, 12:48 PM IST

ಶಿವಮೊಗ್ಗದ ಇತಿಹಾಸ ತಿಳಿದಿರುವವರು ಯಾರೂ ಈ ಘಟನೆಯಿಂದ ಆಶ್ಚರ್ಯ ಪಡುವುದಿಲ್ಲ. ಏಕೆಂದರೆ ಮೊದಲ ಗಲಭೆ ನಡೆದಲ್ಲಿಂದ ನಿರಂತರವಾಗಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ನಿನ್ನೆ ನಾನು ಉಡುಪಿಗೆ ಹೋಗುವಾಗ ಕಟೌಟ್‌ಗಳನ್ನು ನೋಡಿಕೊಂಡು ಬಂದೆ, ಅಲ್ಲಿ ಪ್ರಚೋಧನಕಾರಿ ಅಂಶಗಳು ಇದ್ದವು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ(Chakraborty Sulibele) ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ದಾರೆ. ಗಾಂಧಿಬಜಾರ್‌ ಸರ್ಕಲ್‌ನಲ್ಲಿ(Gandhi Bazaar) ತಾತ್ಕಾಲಿಕ ಮಸೀದಿ ನಿರ್ಮಾಣ ಮಾಡಲಾಗಿತ್ತು. ಅವರು ದಾಂಧಲೆಗೆ ಮೊದಲೇ ಸಿದ್ಧವಾಗಿ ಬಂದಂತೆ ಕಾಣುತ್ತದೆ. ಗಣೇಶನ ಮೂರ್ತಿ ಇಡಲು ಎಲ್ಲಾ ಅನುಮತಿ ಪಡೆಯಬೇಕು. ಆದ್ರೆ ಅವರು ಯಾವುದಕ್ಕೂ ಕೇರ್‌ ಮಾಡುವುದಿಲ್ಲ. ಎಸ್‌ಪಿ ಹೇಳುವ ಪ್ರಕಾರ ಕೆಲವರು ಗಲಭೆಗೆ ಸಿದ್ಧರಾಗಿಯೇ ಬಂದಿದ್ದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  JDS ಸಭೆಗೆ ಗೈರಾದವರ ಮುಂದಿನ ನಡೆ ಏನು..? ಮೈತ್ರಿಯಿಂದ ಹುಟ್ಟಿದ್ದ ಅಸಮಾಧಾನ ತಣ್ಣಗಾಯ್ತಾ..?