Jul 13, 2024, 4:33 PM IST
ಅದೊಂದು ನಟೋರಿಯಸ್ ಗ್ಯಾಂಗ್.ಬಟ್ಟೆ ಬಿಚ್ಚಿ, ಚಡ್ಡಿ ಹಾಕೊಂಡು ಅಖಾಡಕ್ಕೆ ಇಳಿದ್ರೆ ಮುಗಿದೇ ಹೊಯ್ತು. ಅಲ್ಲೊಂದು ಮನೆ ಧರೋಡೆ ಫಿಕ್ಸ್. ಅಷ್ಟೇ ಅಲ್ಲ ರಕ್ತ ಹರಿಯೋದೂ ಕೂಡ ಗ್ಯಾರೆಂಟಿ. ಆದ್ರೆ ಈ ಗ್ಯಾಂಗ್‌ನ ಮೇನ್ ಟಾರ್ಗೆಟ್ ನಮ್ಮ ಕರಾವಳಿ. ಮಳೆಗಾಲವನ್ನೇ (Rainy season) ಬಂಡವಾಳ ಮಾಡಿಕೊಳ್ಳೋ ಈ ಕಿರಾತಕರು ಸೀದಾ ಮನೆಗೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿ ನಂತರ ಮನೆಯನ್ನ ದೋಚಿ ಎಸ್ಕೇಪ್ ಆಗಿಬಿಡ್ತಾರೆ. ಹೀಗೆ ಕಳೆದ ಕೆಲ ವರ್ಷಗಳಿಂದ ತಮ್ಮದೇ ಸ್ಟೈಲ್‌ನಲ್ಲಿ ದರೋಡೆ (Robbery)ಮಾಡಿ ಪೊಲೀಸರಿಗೆ ಛಳ್ಳೆಹಣ್ಣು ತನ್ನಿಸುತ್ತಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್(Chaddi gang) ಕೊನೆಗೂ ತಗ್ಲಾಕಿಕೊಂಡಿದೆ. ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಳೆಗಾಲ ಬರ್ತಿದ್ದಂತೆ ಕರಾವಳಿಗೆ ಎಂಟ್ರಿ ಕೊಡೋ ಈ ಚಡ್ಡಿ ಗ್ಯಾಂಗ್ ಮಾಡಿದ್ದೆಲ್ಲಾ ಬರೀ ವಿಫಲ ಯತ್ನಗಳೇ. ಆದ್ರೆ ಇವತ್ತು ಅವರಿಗೆ ಜಾಕ್‌ಪಾಟ್ ಹೊಡೆದಿತ್ತು. ಮಂಗಳೂರಿನ ಮನೆಯಲ್ಲಿ ಲಕ್ಷ ಲಕ್ಷ ಹಣ ಕದ್ದು ಎಸ್ಕೇಪ್ ಆಗಿತ್ತು. ಆದ್ರೆ ಹೀಗೆ ಎಸ್ಕೇಪ್ ಆದ ಕಳ್ಳರು ಐದೇ ಗಂಟೆಯಲ್ಲಿ ತಗ್ಲಾಕಿಕೊಂಡಿದ್ರು. ಕದ್ದ ಮನೆಯ ಕಾರನ್ನೇ ತೆಗೆದುಕೊಂಡು ಎಸ್ಕೇಪ್ ಆಗಿದ್ದ ಕಳ್ಳರು(Theives) ಅದೇ ಕಾರಿನಿಂದ ಸಿಕ್ಕಿಹಾಕಿಕೊಂಡಿದ್ರು. ಸತತ ಪ್ರಯತ್ನಗಳನ್ನ ಮಾಡಿ ವಿಫಲವಾಗಿದ್ದ ಚಡ್ಡಿ ಗ್ಯಾಂಗ್ ಆವತ್ತು ಭರ್ಜರಿ ಬೇಟೆಗೆ ಇಳಿದಿತ್ತು. ಮಧ್ಯರಾತ್ರಿ ಅದೊಂದು ಮನೆಗೆ ನುಗ್ಗಿತ್ತು. ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಕದ್ದು(Theft), ಮನೆಯವರದ್ದೇ ಕಾರು ತೆಗೆದುಕೊಂಡು ಎಸ್ಕೇಪ್ ಆಗಿತ್ತು. ಇನ್ನೂ ಇದೇ ಗ್ಯಾಂಗ್‌ನ ಬೆನ್ನುಬಿದ್ದ ಪೊಲೀಸರು ಕೇವಲ ಐದೇ ಗಂಟೆಯಲ್ಲಿ ಎಲ್ಲಾ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ಬಬ್ಬು ಸ್ವಾಮಿ ದೈವ!