ಶಾಸಕ ಜಮೀರ್‌ ವಿರುದ್ಧ ಗಂಭೀರ ಆರೋಪ, ಎಫ್‌ಐಆರ್‌ ದಾಖಲು

ಶಾಸಕ ಜಮೀರ್‌ ವಿರುದ್ಧ ಗಂಭೀರ ಆರೋಪ, ಎಫ್‌ಐಆರ್‌ ದಾಖಲು

Published : Feb 20, 2022, 04:12 PM IST

ನ್ಯಾಯಾಲಯದ ಆದೇಶದ ಮೇರೆಗೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಹಾಗೂ ಸಹೋದರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು, (ಫೆ.20): ಭೂ ಕಬಳಿಕೆ ಆರೋಪದಡಿ ನ್ಯಾಯಾಲಯದ ಆದೇಶದ ಮೇರೆಗೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಹಾಗೂ ಸಹೋದರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಜಮೀರ್‌ ಹಾಗೂ ಸಹೋದರರ ವಿರುದ್ಧ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಶಾಹೀತಾ ನಾಸೀನ್, ತಸ್ನೀಮ್ ಫಾತೀಮಾರಿಂದ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಕೋರ್ಟ್ ಆದೇಶದಂತೆ ಎಫ್‌ಐಆರ್ ದಾಖಲಾಗಿದೆ. ಜಮೀರ್ ಕುಟುಂಬದ ವಿರುದ್ಧ ಆರೋಪಿಸಿ ಸೈಟ್‌ ಮಾಲೀಕರು ಕೋರ್ಟ್‌ ಮೊರೆ ಹೋಗಿದ್ದರು.

ಹಿಜಾಬ್‌ ಇಲ್ಲದಿದ್ದರೆ ರೇಪ್‌ ಹೆಚ್ಚುತ್ತವೆ ಎಂದಿದ್ದ ಶಾಸಕ ಜಮೀರ್ ಕ್ಷಮೆಯಾಚನೆ ಹಿಂದಿದೆ ಈ ಸೀಕ್ರೆಟ್!

ಜೆಸಿ ನಗರ ನಿವಾಸಿಗಳಾಗಿದ್ದ ಶಾಹೀತಾ ನಾಸೀನ್ ಸೈಟ್‌ಗಳ ಕಡೆ ಗಮನ ಹರಿಸಿರಲಿಲ್ಲ. ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್ ಕುಟುಂಬದಿಂದಲೇ ಸೈಟ್‌ಗಳ ಕಬಳಿಕೆ ಯತ್ನಿಸಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ನಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಹೀತಾ ನಾಸೀನ್ ಗಂಭೀರ ಆರೋಪ ಮಾಡಿದ್ದರು.

ಖಾಸಗಿ ದೂರು ವಿಚಾರಣೆ ನಡೆಸಿದ ಕೋರ್ಟ್, ಈ ಸಂಬಂಧ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ. ಕಬಳಿಕೆ ಮಾಡಿರುವ ಸೈಟ್ ಸಂಬಂಧ ಯಥಾಸ್ಥಿತಿ ಕಾಪಾಡಲು ಕೋರ್ಟ್‌ ಆದೇಶಿಸಿದೆ. ಆದರೆ ಕೋರ್ಟ್‌ನಿಂದ ತಡೆಯಾಜ್ಞೆ ಬಂದರೂ ಜಮೀರ್‌ ಕುಟುಂಬಸ್ಥರು ಸೈಟ್‌ ಬಿಟ್ಟುಕೊಟ್ಟಿಲ್ಲ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ದೂರುದಾರರಿಂದ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more