Jan 2, 2022, 6:08 PM IST
ತುಮಕೂರು(ಜ. 01) ಇದೊಂದು ರೋಚಕ ಸಿನಿಮಾದ ರೀತಿಯೇ ಇದೆ. ಹಣಕ್ಕಾಗಿ ದೊಡ್ಡ ವ್ಯಕ್ತಿಗಳನ್ನು, ದೊಡ್ಡವರ ಮಕ್ಕಳನ್ನು ಕಿಡ್ನಾಪ್ ಮಾಡಿದ ಹಲವು ಸ್ಟೋರಿಗಳಿವೆ. ಆದರೆ ಇಲ್ಲಿ ಹಣಕ್ಕಾಗಿ ಆನೆಯನ್ನೇ ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಮಠಕ್ಕೆ (Tumkur Mutt) ಸೇರಿದ ಆನೆಯನ್ನೇ (Elephant) ಕಿಡ್ನಾಪ್ (Kiodnap) ಮಾಡಲು ಯತ್ನಿಸಲಾಗಿದೆ. ತುಮಕೂರು ನಗರದ ಹೊರಪೇಟೆಯ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಹೆಣ್ಣಾನೆ ಕಳ್ಳತನಕ್ಕೆ ಸಂಚು ರೂಪಿಸಲಾಗಿತ್ತು.
Bizarre Kidnap : 'ಕಿಡ್ನಾಪ್ ಮಾಡಿದ್ದಾರೆ ಬನ್ನಿ' ಅಲ್ಲಿ ಹೋಗಿ ನೋಡಿದಾಗ ಗೊತ್ತಾಗಿದ್ದೇ ಬೇರೆ
ವಿಚಿತ್ರ ಎಂದರೆ ಈ ಸಂಚಿನಲ್ಲಿ ಅರಣ್ಯ (Forest Department) ಇಲಾಖೆ ಅಧಿಕಾರಿಗಳ ಪಾತ್ರವೂ ಇತ್ತು ಎಂಬ ಮಾಹಿತಿ. ಮಠಕ್ಕೆ ವಂಚಿಸಿ ಗುಜರಾತಿಗೆ ಆನೆ ಸಾಗಿಸಲು ಪ್ಲಾನ್ ರೂಪಿಸಿದ್ದರು. ಬನ್ನೇರುಘಟ್ಟಕ್ಕೆ ಕೆರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆಂದು ಕರೆದೊಯ್ದ ಖದೀಮರು ದಾಬಬಸ್ ಪೇಟೆಯಲ್ಲಿ ಬಳಿ ಮಾವುತನ ಮೇಲೆ ಹಲ್ಲೆ ನಡೆಸಿದ್ದಾರೆ. ಲಾರಿಯಿಂದ ಮಾವುತನನ್ನು ಕೆಳಗಿಸಿದ್ದಾರೆ.
ದಾಬಸ್ ಪೇಟೆಯಿಂದ ಕುಣಿಗಲ್ ತಾಲೂಕಿನ ಹಳ್ಳಿಗೆ ಆನೆ ಸಾಗಿಸಲಾಗಿತ್ತು. ಗುಜರಾತ್ ಮೂಲದ ಸರ್ಕಲ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ್ದರು. ವಕೀಲ ಎಂದು ಹೇಳಿಕೊಂಡು ಬಂದಿದ್ದ ದೇವರಾಜು, ಅರಣ್ಯ ಇಲಾಖೆ ಅಧಿಕಾರಿ ಪ್ರಕಾಶ್ ಎಂಬುವರ ಮೇಲೆ ಆನೆ ಕಿಡ್ನ್ಯಾಪ್ ಯತ್ನ ನಡೆಸಿದ ಆರೋಪ ಬಂದಿದೆ.