ಊಟ ಕೊಟ್ಟಿಲ್ಲಾಂತ ಅಮ್ಮನನ್ನೇ ಹೊಡೆದು ಕೊಂದ ಮಗ, ಅಪ್ಪನೇ ಹೇಳಿಕೊಟ್ಟಿದ್ದನಂತೆ!

ಊಟ ಕೊಟ್ಟಿಲ್ಲಾಂತ ಅಮ್ಮನನ್ನೇ ಹೊಡೆದು ಕೊಂದ ಮಗ, ಅಪ್ಪನೇ ಹೇಳಿಕೊಟ್ಟಿದ್ದನಂತೆ!

Published : Feb 07, 2024, 02:38 PM IST

ಅಮ್ಮ ತನಗೆ ಊಟ ಕೊಟ್ಟಿಲ್ಲವೆಂದು ಅಪ್ರಾಪ್ತ ಮಗನೇ ತಾಯಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ದುರ್ಘಟನೆ ನಡೆದಿದೆ.

ಕೋಲಾರ (ಫೆ.07): ಅದೊಂದು ಪುಟ್ಟ ಕುಟುಂಬ.. ಅಪ್ಪ ಅಮ್ಮ ಮತ್ತು ಮಗ.. ಅಪ್ಪ ದೂರದ ಊರಿನ ತನ್ನ ಜಮೀನಿನಲ್ಲಿ ಕೆಲಸ ಮಾಡ್ತಿದ್ರೆ ತಾಯಿ ಮನೆಯಲ್ಲೇ ಇರುತ್ತಿದ್ದಳು.. ಇನ್ನೂ ಮಗ ಕಾಲೇಜು ಸ್ಟೂಡೆಂಟ್.. ಎಂಟತ್ತು ಮನೆ ಬಾಡಿಗೆ, ಜಮೀನಿನಲ್ಲಿ ಚಿನ್ನದಂತ ಬೆಳೆ.. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಆವತ್ತೊಂದು ದಿನ.. ಮಗ ತನ್ನ ತಾಯಿಯನ್ನೇ ಕೊಂದು ಮುಗಿಸಿದ್ದ..

ಅಷ್ಟೇ ಅಲ್ಲ ಅಮ್ಮನ ಕಥೆ ಮುಗಿಸಿ ಪೊಲೀಸ್ ಠಾಣೆಗೆ ಬಂದಿದ್ದ. ಆದ್ರೆ ಈ ಕೇಸ್ನ ತನಿಖೆ ನಡೆಸಿದ್ದ ಪೊಲೀಸರಿಗೆ ಎಫ್.ಎಸ್.ಎಲ್ ಟೀಂ ಕೊಟ್ಟ ವರದಿ ತಲೆ ತಿರುಗುವಂತೆ ಮಾಡಿತ್ತು.. ಅಲ್ಲಿ ತಾಯಿಯನ್ನ ಮಗನೊಬ್ಬನೇ ಕೊಂದಿರಲಿಲ್ಲ ಅನ್ನೋ ಸತ್ಯ ಪೊಲೀಸರಿಗೆ ಗೊತ್ತಾಗಿತ್ತು.. ಹಾಗಾದ್ರೆ ಅಲ್ಲಿ ಮಹಿಳೆಯೊಬ್ಬಳ ಕಥೆ ಮುಗಿಸಿದ್ದು ಯಾರು..? ನಾನೇ ಕೊಂದಿದ್ದು ಅಂತ ಬಂದಿದ್ದ ಮಗನ ಹಿಂದೆ ಇದ್ದ ಆ ಮಾಸ್ಟರ್ ಮೈಂಡ್ ಯಾವುದು.? ಗೊತ್ತಾ..?

ಒಂದು ರಾತ್ರಿಗೆ ಎಷ್ಟು ಚಾರ್ಜ್ ಮಾಡ್ತೀರಾ..? ರಿಪೋರ್ಟರ್‌ ಪ್ರಶ್ನೆಗೆ ಸನ್ನಿ ಲಿಯೋನ್ ರಿಯಾಕ್ಷನ್‌ಗೆ ಬೆಚ್ಚಿಬಿದ್ದ ಬಾಲಿವುಡ್..!

ಯಸ್... ಆ ಬಾಲಕ ತನ್ನ ತಾಯಿಯನ್ನ ಕೊಲ್ಲಲು ಬಳಸಿದ್ದ ರಾಡ್ನಲ್ಲಿ ಆತನ ತಂದೆಯ ಫಿಂಗರ್ ಪ್ರಿಂಟ್ಸ್ ಕೂಡ ಇತ್ತು.. ಹಾಗಾದ್ರೆ ಆ ಮಹಿಳೆಯನ್ನ ತಂದೆ ಮಗ ಇಬ್ಬರೂ ಸೇರಿ ಕೊಂದರಾ..? ಊಟ ಕೊಡಲಿಲ್ಲ ಅಂತ ಕೊಂದೆ ಎಂದು ಹೆಳಿದ ಮಗ ಸುಳ್ಳು ಹೆಳಿದ್ನಾ..? ಅಷ್ಟಕ್ಕೂ ಆ ಮನೆಯಲ್ಲಿ ಆವತ್ತು ನಡೆದಿದ್ದೇನು..? 

ನೇತ್ರಾ ಕೊಲೆಗೆ ಕಾರಣವಾಗಿದ್ದ ರಾಡ್ನಲ್ಲಿ ಎರಡು ಫಿಂಗರ್ ಪ್ರಿಂಟ್‌ಗಳಿದ್ದವು. ಅದರಲ್ಲಿ ಒಂದು ಮಗನದ್ದಾದ್ರೆ ಮತ್ತೊಂದು ಯಾರದ್ದು ಅನ್ನೋ ಸಂಶಯ ಪೊಲೀಸರಿಗೆ ಕಾಡಿತ್ತು. ಇರಲಿ ಅಂತ ಆ ಮನೆಯ ಒಡೆಯ ಅಂದ್ರೆ ಗಂಡನ ಫಿಂಗರ್ ಪ್ರಿಂಟ್ ಪರಿಶೀಲನೆ ಮಾಡಿದ್ರು ಆಗಲೇ ನೋಡಿ ನೇತ್ರಾಳನ್ನ ತಂದೆ ಮಗ ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ ಅಂತ ಗೊತ್ತಾಗೋದು. ಹೆಂಡತಿ ಪಾರ್ಟಿ, ಮೋಜು ಮಸ್ತಿ ಅಂತ ಸದಾ ಹೊರಗೇ ಉಳಿಯುತ್ತಿದ್ದಳು. ಒಮ್ಮೆ ಬೇರೊಬ್ಬನ ಪುರುಷನೊಂದಿಗೆ ಹೆಂಡತಿ ಮಗನ ಕೈಯಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಳು. ಯಾವಾಗ ಮಗನಿಗೆ ತಾಯಿಯ ಬಗ್ಗೆ ಗೊತ್ತಾಯ್ತೋ ತಂದೆಯ ಜೊತೆ ಸೇರಿ ಅಮ್ಮನನ್ನ ಮುಗಿಸಲು ನಿರ್ಧರಿಸಿಬಿಡ್ತಾನೆ. ಅಷ್ಟೇ ಅಲ್ಲ ತಾಯಿಯನ್ನ ಕೊಂದು ತಂದೆಯನ್ನ ಪಾರು ಮಾಡುವ ಪ್ಲಾನ್ ಕೂಡ ಮಾಡಿದ್ದನು.

ಹೇಗಿತ್ತು ತಂದೆ ಮಗನ ಸ್ಕ್ರೀನ್ ಪ್ಲೇ.. ಸದ್ಯ ತಾಯಿಯನ್ನ ಕೊಂದ ಮಗ ಮತ್ತು ಆತನ ಅಪ್ಪ ಇಬ್ಬರೂ ಜೈಲುಪಾಲಾಗಿದ್ದಾರೆ. ಅಪ್ಪನನ್ನ ಉಳಿಸಲು ಹೋದ ಮಗ ಈಗ ತನ್ನ ಓದು ಭವಿಷ್ಯ ಎರಡಕ್ಕೂ ಕೊಳ್ಳಿ ಇಟ್ಟರೆ, ಮಗನನ್ನ ಮುಂದೆ ಬಿಟ್ಟು ಎಸ್ಕೇಪ್ ಆಗಲು ನೋಡಿ ಈಗ ಮಗನ ಜೊತೆಯೇ ಕಂಬಿ ಏಣಿಸುತ್ತಿದ್ದಾನೆ. ಇದಕ್ಕೇ ಹೆಳೋದು ತಪ್ಪು ಮಾಡಿದವನು ನೀರು ಕುಡಿಯಲೇಬೇಕು. 

21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more