7 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!

7 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!

Published : Nov 21, 2025, 02:09 PM IST

ರಾಜ್ಯ ಮಾತ್ರವಲ್ಲದೇ ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನ ಎಟಿಎಂ ವಾಹನ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸಿದ್ದಾರೆ. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್​​.ಐ.ಆರ್​​.

ಬುಧವಾರ ಮಧ್ಯಾಹ್ನ 12.20ಕ್ಕೆ ರಾಬರಿ... ಗುರುವಾರ 12.20ಕ್ಕೆ ಸರಿಯಾಗಿ ದರೋಡೆಕೋರರ ಬಂಧನ.. ಇದೇ ಅಲ್ವಾ ರೋಚಕ ತನಿಖೆ ಆಂತ ಹೇಳೋದು.. ಯಸ್​​​ ನಾವು ಹೆಳೋಕೆ ಹೊರಟಿರೋದು.. ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬಿಗ್ಗೆಸ್ಟ್​​ ಬ್ಯಾಂಕ್​ ರಾಬರಿ ಬಗ್ಗೆ.. ಕೋಟಿ ಕೋಟಿ ಹಣ ತುಂಬಿಕೊಂಡು ಎಟಿಎಂಗೆ ಹಾಕಲು ಹೋಗುತ್ತಿದ್ದ ವಾಹನವನ್ನ ತಡೆದಿದ್ದ ರಾಬರ್ಸ್​​ ಆರ್​​.ಬಿ.ಐ ಅಧಿಕಾರಿಗಳು ಅಂತ ಹೇಳಿಕೊಂಡು ಸಿಬ್ಬಂದಿಗಳನ್ನ ಯಾಮಾರಿಸಿ ಬರೋಬ್ಬರಿ 7 ಕೋಟಿಯನ್ನ ಕದ್ದು ಎಸ್ಕೇಪ್​ ಆಗಿದ್ರು.. ಆದ್ರೆ ಈ ಕೇಸ್​​ ಅನ್ನ ಸೀರಿಯಸ್ಸಾಗಿ ತಗೆದುಕೊಂಡ ಬೆಂಗಳೂರು ಪೊಲೀಸರು ದರೋಡೆಕೋರರ ಹಿಂದೆ ಬಿದ್ದಿದ್ರು.. ಸಣ್ಣ ಸುಳಿವು ಬಿಡದೇ ಎಲ್ಲಾ ಆ್ಯಂಗಲ್​ನಲ್ಲೂ ತನಿಖೆ ನಡೆಸಿದ್ರು.. ಪರಿಣಾಮ ಘಟನೆ ನಡೆದು 24 ಗಂಟೆಯಲ್ಲೇ ಕಳ್ಳರು ತಗ್ಲಾಕಿಕೊಂಡಿದ್ದಾರೆ.. ಅಷ್ಟಕ್ಕೂ ಈ ದರೋಡೆಕೋರರು ತಗ್ಲಾಕಿಕೊಂಡಿದ್ದೇಗೆ..? ಪೊಲೀಸರ ರೋಚಕ ಬೇಟೆ ಹೇಗಿತ್ತು ಅನ್ನೋದೇ ಇವತ್ತಿನ ಎಫ್​​.ಐ.ಆರ್​​. ನಿನ್ನೆ ಇಷ್ಟು ಮಾಹಿತಿ ಸಿಕ್ಕಿತ್ತು.. ಸ್ವತಃ ಗೃಹಮಂತ್ರಿಗಳೇ ಖದೀಮರ ಸುಳಿವು ಸಿಕ್ಕಿದೆ ಅಂತಲೂ ಹೇಳಿದ್ರು.. ಅವರು ಹೇಳಿದಂತೆಯೇ ಪೊಲೀಸರು ಇಬ್ಬರನ್ನ ಲಾಕ್​ ಮಾಡಿದ್ದಾರೆ.

ಅಷ್ಟಕ್ಕೂ ಈ ಕಳ್ಳರು ಪೊಲೀಸರ ಕೈಗೆ ಸಿಕ್ಕಿದ್ದೇಗೆ?
ಅವರು ಬಳಸಿದ್ದು ಮೂರು ಕಾರು.. ಒಂದು ಕಾರಿನಲ್ಲಿ ಡೈರಿ ಸರ್ಕಲ್​ನಲ್ಲಿ ಬಂದು ಹಣ ಕದ್ದರೆ.. ಎಸ್ಕೇಪ್​ ಆಗುವಾಗ ಮಾರ್ಗ ಮಧ್ಯೆ ಮತ್ತೊಂದು ಕಾರಿಗೆ ಹಣವನ್ನ ವರ್ಗಾವಣೆ ಮಾಡಲಾಗುತ್ತೆ.. ಮೂರನೇ ಕಾರನ್ನ ಕಳ್ಳರು ರಾಜ್ಯವನ್ನ ದಾಟೋಕೆ ಬಳಸುತ್ತಾರೆ.. ಆದ್ರೆ ಮೂರೂ ಕಾರಿನ ಮಾಹಿತಿ ಸಿಕ್ಕ ಪೊಲೀಸರು ಆ ಕಾರುಗಳ ಹಿಂದೆ ಬಿದ್ದರು.. ವಿಶೇಷವಾಗಿ ಅವರು ಹೋಗುತ್ತಿದ್ದ ಮಾರ್ಗದ ಸಿಸಿ ಕ್ಯಾಮರಾಗಳ ಮೇಲೆ ನಿಗಾ ಇಟ್ಟರು.. ಆಗಲೇ ನೋಡಿ ಕಳ್ಳರ ಪಿನ್​ ಟು ಪಿನ್​ ಇನ್ಫಾರ್ಮೇಷನ್​ ಸಿಗೋದು.. ಎಲ್ಲಾ ಮಹಿತಿಯನ್ನ ಪಡೆದು ಕೊನೆಗೆ ತಿರುಪತಿಯಲ್ಲಿ ಖದೀಮರನ್ನ ಲಾಕ್​ ಮಾಡಿದ್ರು.

ಹೌದು.. ಇವತ್ತು ಕಳ್ಳರು ಸಿಕ್ಕಿಹಾಕಿಕೊಂಡಿದ್ದಾರೆ.. ಎಲ್ಲವೂ ಸುಖಾಂತ್ಯ ಕಾಣುತ್ತಿದೆ.. ಬಟ್​​ ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳೋ ಜವಾಬ್ದಾರಿ ಬೆಂಗಳೂರು ಪೊಲೀಸರ ಮೇಲಿದೆ.

02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
Read more