Military Information Leak: ಆರೋಪಿಯ ಮೊಬೈಲ್‌ನಲ್ಲಿ ಸಿಕ್ಕಿವೆ ಅಚ್ಚರಿಯ ಮಾಹಿತಿ!

Nov 27, 2021, 1:03 PM IST

ಬೆಂಗಳೂರು(ನ.27): ದೇಶದ ಮಿಲಿಟರಿ ಮಾಹಿತಿಯನ್ನು (Military Information) ವೈರಿಗಳಿಗೆ ಲೀಕ್ ಮಾಡುತ್ತಿದ್ದ  ರಾಜಸ್ಥಾನ ಮೂಲದ ವ್ಯಕ್ತಿಯನ್ನು ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.  ಕಿರಾತಕ ಜೀತೇಂದ್ರ ರಾಥೋಡ್ (Jitendra Rathore) ಸೇನಾ ಯುನಿಫಾರ್ಮ್ ಸಹ ಇಟ್ಟುಕೊಂಡಿದ್ದ. ಈತ  ರಾಜಸ್ಥಾನದ (Rajasthan) ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿತ್ತು. ಪಾಕಿಸ್ತಾನದ ಐಎಸ್ಐ (ISI) ಅಧಿಕಾರಿಗಳ ಜೊತೆ ನೇರ ಸಂಪರ್ಕ ಹೊಂದಿದ್ದು,  ವಾಟ್ಸಪ್ ಸಂದೇಶ, ಕಾಲ್ ಮೂಲಕ ಸೇನೆಯ ಸ್ಥಳ ಹಾಗೂ ಮಾಹಿತಿ ಕಳುಹಿಸಿದ್ದ. ಕಣ್ಣಿಗೆ ಕಾಣದ ಯುವತಿಯ ಮಾತಿಗೆ ಮರುಳಾಗಿ ಮಾಹಿತಿ ಕಳಿಸುತ್ತಿದ್ದ ಎಂಬ ಅಂಶವೂ ಬಹಿರಂಗವಾಗಿತ್ತು. ವೈರಿಗಳು ಯುವತಿ  ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿ ಮಾಡಿಕೊಂಡು ಈತನನ್ನು ಸಂಪರ್ಕ ಮಾಡಿದ್ದರು. 

ಹಣಕ್ಕಾಗಿ ದೇಶದ ಸಬ್‌ಮರೀನ್‌ ಡೇಟಾ ಲೀಕ್ ಮಾಡಿದ ಕಮಾಂಡರ್‌ ಸೇರಿ ಐವರ ಬಂಧನ

ಈಗ ಈ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು ಬೆಂಳೂರಿನ ಭಯೋತ್ಪಾದನೆ ನಿಗ್ರಹ ದಳ (Anti terrorist cell) ಇತನ ಮೋಬೈಲ್‌ ರಿಟ್ರೀವ್‌ (Retrieve) ಮಾಡಿದೆ. ಈ ವೇಳೆ ಮೋಬೈಲ್‌ನಲ್ಲಿ 50 ಕ್ಕೂ ಹೆಚ್ಚು ಯುವತಿಯರ ಫೋಟೋಗಳು ಪತ್ತೆಯಾಗಿವೆ.  ಇನ್ಸ್ಟಾಗ್ರಾಮ್‌ (Instagram) ಹಾಗೂ ಫೇಸ್‌ಬುಕ್‌ (Facebook) ಬಳಸಿ ಕಾರಾಚಿಯ ಮೂಲದ ಯುವತಿಯನ್ನು ಪರಿಚಯ ಮಾಡಿಕೊಳ್ಳುವುದರ ಮೂಲಕ ಪಾಕ್‌ ಇಂಟಲಿಜನ್ಸ್‌ಗೆ (Pakistan Intelligence) ಕೆಲವು ಫೋಟೋಗಳನ್ನು ರವಾನಿಸಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.