Gadag: ಲವ್ ಮ್ಯಾರೇಜ್, ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ..!

Gadag: ಲವ್ ಮ್ಯಾರೇಜ್, ಪತ್ನಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಪತಿ..!

Suvarna News   | Asianet News
Published : Mar 13, 2022, 05:13 PM ISTUpdated : Mar 13, 2022, 05:45 PM IST

ಅಪೂರ್ವಾ ಅಲಿಯಾಸ್‌ ಅರ್ಫಾ ಬಾನು ನಾಲ್ಕು ವರ್ಷದ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್‌ನನ್ನು ಪ್ರೇಮಿಸಿ ವಿವಾಹವಾಗಿದ್ದಳು.  ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್‌ನನ್ನು ಮದುವೆಯಾಗಿಯಾದ್ದಳು. 

ಗದಗ (ಮಾ. 13): ಅಪೂರ್ವಾ ಅಲಿಯಾಸ್‌ ಅರ್ಫಾ ಬಾನು ನಾಲ್ಕು ವರ್ಷದ ಹಿಂದೆ ಹುಬ್ಬಳ್ಳಿ ಮೂಲದ ಇಜಾಜ್‌ನನ್ನು ಪ್ರೇಮಿಸಿ ವಿವಾಹವಾಗಿದ್ದಳು.  ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್‌ನನ್ನು ಮದುವೆಯಾಗಿಯಾದ್ದಳು. ನಂತರ ಅರ್ಫಾಬಾನು ಆಗಿ ಹೆಸರು ಬದಲಾಯಿಸಿಕೊಂಡಳು. ಮದುವೆಯಾದ ಹೊಸತರಲ್ಲಿ ಎಲ್ಲ ಸರಿಯಾಗೇ ಇತ್ತು.

ಇಜಾಜ್‌ಗೆ ಇದು ಎರಡನೇ ಮದುವೆ. ಆತನ ಮೊದಲ ಹೆಂಡತಿಗೆ ಮೂರು ಮಕ್ಕಳು ಇದ್ದಾರೆ. ಮೊದಲ ಹೆಂಡತಿ ವಿಚಾರವನ್ನು ಇಜಾಜ್‌ ಗುಟ್ಟಾಗೇ ಇಟ್ಟಿದ್ದ. ನಂತರದ ದಿನಗಳಲ್ಲಿ ಅಪೂರ್ವಾಳಿಗೆ ತನ್ನ ಗಂಡನ ಮೊದಲನೇ ಮದುವೆ ವಿಷಯ ಗೊತ್ತಾಗಿದೆ. ಇದು ತಿಳಿದ ನಂತರ ಆಗಾಗ ಸಣ್ಣ-ಪುಟ್ಟಜಗಳವಾಗುತ್ತಿತ್ತು. ಮುಸ್ಲಿಂ ಪದ್ಧತಿ ಪಾಲಿಸು, ಬುರ್ಕಾ ಧರಿಸುವಂತೆ ಒತ್ತಡ ಹಾಕುತ್ತಿದ್ದನಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಅಪೂರ್ವಾ ತನ್ನ ಗಂಡನ ಮನೆ ಹುಬ್ಬಳ್ಳಿಯಿಂದ ತನ್ನ ತವರು ಮನೆಗೆ ಬಂದು ಇಲ್ಲಿಯೇ ಇದ್ದಳು. ತವರು ಮನೆಯಲ್ಲಿದ್ದರೂ ಇಜಾಜ್‌ನಿಂದ ಮತ್ತಷ್ಟುಕಿರಿಕಿರಿ ಶುರುವಾಗಿತ್ತು. ಅಪೂರ್ವಾ ತನ್ನ ತಾಯಿ ಸಹಾಯ ಪಡೆದು ವಿಚ್ಛೇದನಕ್ಕೆ ಅರ್ಜಿ ನೀಡಿದ್ದಳು. ಇದೇ ಕಾರಣಕ್ಕೆ ಮತ್ತಷ್ಟುಕೋಪಗೊಂಡಿದ್ದ ಇಜಾಜ್‌ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಸಾಯಿಸುವ ಪ್ಲಾನ್‌ ಮಾಡಿದ್ದಾನೆ. 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more