ಸ್ಯಾಂಟ್ರೋ ರವಿ ಪ್ರಕರಣ: ಏಳು ಮಂದಿಯನ್ನ ಅಮಾನತು ಮಾಡಿ ಎಂದ ಸಂತ್ರಸ್ತೆ

Jan 11, 2023, 12:27 PM IST

ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಕುರಿತು ಸಂತ್ರಸ್ತೆ ಮಾತನಾಡಿದ್ದು, ಎಸ್.ಐ.ಆರ್'ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ಇಷ್ಟು ದಿನ ಶಿಕ್ಷೆ ಕೊಡದಿದ್ದಕ್ಕೆ ಪದೇ ಪದೇ ಅಪರಾಧ ಮಾಡ್ತಿದ್ದ. ಈಗಲಾದ್ರೂ ಶಿಕ್ಷೆ ನೀಡಿದ್ರೆ ನನ್ನಂಥವರಿಗೆ ಆಗುವ ಅನ್ಯಾಯ ತಪ್ಪುತ್ತೆ ಎಂದು ತಿಳಿಸಿದ್ದಾರೆ. ಕಳ್ಳರಂತೆ ಮನೆಗೆ ಬಂದು ಅಮಾನುಷವಾಗಿ ಎಳೆದುಕೊಂಡು ಹೋದ್ರು. ಕಾರಿನಲ್ಲಿ ಬೈದು ನಿಂದಿಸಿದ್ರು. ಸಾಕ್ಷಿ ಕೊಟ್ಟರು ಐಪಿಎಸ್‌ ರವಿ ಅದನ್ನು ಮುಖದ ಮೇಲೆ ಎಸೆದರು. ಇವರುಗಳ ಮೇಲೆ ಕ್ರಮ ಆದಾಗ ಕಾನೂನು ಇದೆ ಎಂಬ ನಂಬಿಕೆ ಬರುತ್ತೆ ಎಂದು ಸುವರ್ಣ ನ್ಯೂಸ್‌ಗೆ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ಗೆ ತಾಯಿ-ಮಗು ಬಲಿ: ಕಾಮಗಾರಿ ಸ್ಥಳದಲ ...