Mar 14, 2023, 7:01 PM IST
ಬೆಂಗಳೂರು (ಮಾ.14): ಬಾಲಿವುಡ್‌ನ ಸೂಪರ್ ಹಿಟ್ ಗೀತೆಗಳಿಗೆ ತನ್ನದೇ ಭಿನ್ನ ಶೈಲಿಯಲ್ಲಿ ಡಾನ್ಸ್ ಮಾಡುವ ಮೂಲಕ ಇಂಟರ್ನೆಟ್‌ಗೆ ಕಿಚ್ಚು ಹಚ್ಚಿದ್ದ ನಾರ್ವೆ ಮೂಲದ ಪ್ರಖ್ಯಾತ ಡಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಭಾರತ ಪ್ರವಾಸದಲ್ಲಿದೆ. ಸಂಪೂರ್ಣ ಪುರುಷ ಡಾನ್ಸರ್‌ಗಳಿಂದಲೇ ತುಂಬಿರುವ ಕ್ವಿಕ್ ಸ್ಟೈಲ್ ಇಂಟರ್ನೆಟರ್‌ನಲ್ಲಿ ಸೆನ್ಸೇಷನ್ ಆಗಿದೆ. ಅದರಲ್ಲೂ ಬಾಲಿವುಡ್ ಗೀತೆಗಳಾದ ಕಾಲಾ ಚಶ್ಮಾ, ಸದ್ದಿ ಗಲ್ಲಿ, ಚುರಾಕೆ ದಿಲ್ ಮೇರಾ ಸೇರಿದಂತೆ ಇತರ ಕೆಲವೊಂದು ಹಾಡಿಗೆ ಇವರುಗಳು ಮಾಡಿರುವ ನೃತ್ಯಗಳು ಸೂಪರ್ ಹಿಟ್ ಎನಿಸಿದ್ದವು.
ಮಂಗಳವಾರ ಈ ಹಿಪ್ ಹಾಪ್ ಗ್ರೂಪ್ ತನ್ನ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿರೋದು ಬೇರೆ ಯಾರೋ ಅಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಕ್ವಿಕ್ ಸ್ಟೈಲ್‌ನ ಡಾನ್ಸರ್‌ಗಳ ಜೊತೆ ವಿರಾಟ್ ಕೊಹ್ಲಿ ತಮ್ಮ ಡಾನ್ಸ್‌ನ ಪರಿಚಯವನ್ನೂ ಫ್ಯಾನ್ಸ್‌ಗಳಿಗೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ವಿರಾಟ್ ಕೊಹ್ಲಿ 75ನೇ ಶತಕ, 'ಮಹಾಕಾಲ ಶಿವ' ಯಾರನ್ನೂ ಕೈಬಿಡೋದಿಲ್ಲ ಎಂದ ಫ್ಯಾನ್ಸ್!