ಟೀಂ ಇಂಡಿಯಾದ ಕೆಲ ಆಟಗಾರರು ಚುಟುಕು ಮಹಾ ಸಂಗ್ರಾಮಕ್ಕೆ ತಮ್ಮ ಸ್ಥಾನ ಪಕ್ಕಾ ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಕೆಲವರು ಮುಂಬರುವ ಐಪಿಎಲ್ ಟೂರ್ನಿಯನ್ನು ಅಖಾಡವನ್ನಾಗಿ ರೂಪಿಸಿಕೊಂಡಿದ್ದಾರೆ.
ನವದೆಹಲಿ(ಫೆ.15): ಬಹುನಿರೀಕ್ಷಿತ 2020ರ ಟಿ20 ವಿಶ್ವಕಪ್ ಟೂರ್ನಿಗೆ ಆರೇಳು ತಿಂಗಳುಗಳು ಬಾಕಿಯಿದೆ. ಹೀಗಿರುವಾಗಲೇ ಟೀಂ ಇಂಡಿಯಾದಲ್ಲಿ ಸ್ಫರ್ಧೆ ಜೋರಾಗಿಯೇ ಆರಂಭವಾಗಿದೆ.
ಟೀಂ ಇಂಡಿಯಾದ ಕೆಲ ಆಟಗಾರರು ಚುಟುಕು ಮಹಾ ಸಂಗ್ರಾಮಕ್ಕೆ ತಮ್ಮ ಸ್ಥಾನ ಪಕ್ಕಾ ಮಾಡಿಕೊಂಡಿದ್ದಾರೆ. ಇನ್ನು ಮತ್ತೆ ಕೆಲವರು ಮುಂಬರುವ ಐಪಿಎಲ್ ಟೂರ್ನಿಯನ್ನು ಅಖಾಡವನ್ನಾಗಿ ರೂಪಿಸಿಕೊಂಡಿದ್ದಾರೆ.
ಅದರಲ್ಲೂ ಟೀಂ ಇಂಡಿಯಾದ ಮೂವರು ಆಟಗಾರರ ಪ್ರದರ್ಶನ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರ ಮಾಡಲಿದೆ. ಯಾರು ಆ ಆಟಗಾರರು? ಏನು ಇವರ ಕತೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...