ಗುರುವಾರ(ಜ.16) ಬಿಸಿಸಿಐ 2019-20ನೇ ಸಾಲಿನ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದ್ದು 27 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಧೋನಿ ಹೆಸರು ನಾಪತ್ತೆಯಾಗಿದೆ.
ಬೆಂಗಳೂರು(ಜ.17): ದಶಕಗಳ ಟೀಂ ಇಂಡಿಯಾ ಆಪತ್ಭಾಂಧವನಾಗಿದ್ದ ಮಹೇಂದ್ರ ಸಿಂಗ್ ಧೋನಿ, ಇದೀಗ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಬಿಸಿಸಿಐ ಧೋನಿ ನಿಮ್ಮ ಸೇವೆ ನಮಗೆ ಸಾಕು ಎಂಬರ್ಥದ ಸೂಚನೆಯನ್ನು ನೀಡಿದೆ.
ಹೌದು, ಗುರುವಾರ(ಜ.16) ಬಿಸಿಸಿಐ 2019-20ನೇ ಸಾಲಿನ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದ್ದು 27 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಧೋನಿ ಹೆಸರು ನಾಪತ್ತೆಯಾಗಿದೆ.
ಹೀಗಾಗಿ ಧೋನಿ ಮುಂದೇನು ಮಾಡಲಿದ್ದಾರೆ..? ಮತ್ತೆ ಧೋನಿ ಟೀಂ ಇಂಡಿಯಾ ಕೂಡಿಕೊಳ್ಳುವ ಸಾಧ್ಯತೆಯಿದೆಯಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ..