ಟಿ20 ವಿಶ್ವಕಪ್‌: ಕೆನಡಾ ಟೀಂನಲ್ಲಿ ದಾವಣಗೆರೆ ಯುವಕ!

ಟಿ20 ವಿಶ್ವಕಪ್‌: ಕೆನಡಾ ಟೀಂನಲ್ಲಿ ದಾವಣಗೆರೆ ಯುವಕ!

Published : Jun 02, 2024, 05:19 PM ISTUpdated : Jun 02, 2024, 05:20 PM IST

ಅಮೆರಿಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ದಾವಣಗೆರೆ ಯುವಕ
ಕೆನಡಾ ಟೀಮ್‌ನ ವಿಕೆಟ್ ಕೀಪರ್ ಆಗಿ‌ ಮಿಂಚುತ್ತಿರುವ ಅದ್ಭುತ ಕ್ರಿಕೆಟ್ ಪ್ರತಿಭೆ
ಸಾಫ್ಟವೇರ್ ಇಂಜಿನಿಯರಿಂಗ್ ಮುಗಿಸಿ ಕೆನಾಡದಲ್ಲಿ ನೆಲೆಸಿ, ಅಲ್ಲೇ ಉದ್ಯೋಗ

ದಾವಣಗೆರೆ: ದೂರದ ಅಮೆರಿಕಾದಲ್ಲಿ(America) ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ(T20 World Cup) ದಾವಣಗೆರೆ ಯುವಕನೊಬ್ಬ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾನೆ. ಈ ಪೋಟೋದಲ್ಲಿ ಕಾಣುತ್ತಿರುವ ಈತನ ಹೆಸರು ಶ್ರೇಯಸ್ ಮೋವಾ ಕೆನಡಾ ಟೀಮ್‌ನ ವಿಕೆಟ್ ಕೀಪರ್ ಆಗಿ‌ ಮಿಂಚುತ್ತಿದ್ದಾನೆ. ದಾವಣಗೆರೆಯ(Davanagere) ಎಂ.ಜಿ.ವಾಸುದೇವರೆಡ್ಡಿ ಮತ್ತುಎನ್ ಯಶೋಧಾ ದಂಪತಿಗ ಪುತ್ರ ಶ್ರೇಯಸ್ ಮೋವ್ವಾ ಅದ್ಭುತ ಕ್ರಿಕೆಟ್ ಪ್ರತಿಭೆ. ದಾವಣಗೆರೆಯಲ್ಲಿ ಸಾಫ್ಟವೇರ್ ಇಂಜಿನಿಯರಿಂಗ್ ಮುಗಿಸಿ ಶ್ರೇಯಸ್ ಕೆನಡಾ ದೇಶಕ್ಕೆ ಹೋಗಿದ್ದ ಅಲ್ಲಿಯ ಪೌರತ್ವ ಪಡೆದುಕೊಂಡು ಅಲ್ಲಿಯೇ ನೆಲೆಸಿದ್ದಾರೆ. ಚಿಕ್ಕವಯಸ್ಸಿನಿಂದಲೂ ಶ್ರೇಯಸ್‌ಗೆ ಕ್ರಿಕೆಟ್ ಅಂದರೆ ಪಂಚಪ್ರಾಣ.ಈತನ ಆಟ ಹಾಗೂ ಅವರ ಎನರ್ಜಿ ನೋಡಿದ್ದ ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಕೋಚ್ ನಾಗರಾಜ್ ಆತನನ್ನು ವಿಕೆಟ್ ಕೀಪರ್ ಮಾಡಿದ್ದರು. ಉತ್ತಮ ಬ್ಯಾಟಿಂಗ್ ಕೌಶಲ್ಯತೆ ಹೊಂದಿದ್ದ ಶ್ರೇಯಸ್ ಓದಿನ ಜೊತೆಗೆ ಅಂತರ್ ರಾಜ್ಯ, 19 ಹಾಗೂ 16 ವರ್ಷದೊಳಗಿನ ಪಂದ್ಯಗಳಲ್ಲಿ ಆಡಿ ಶತಕ ಸಿಡಿದ್ದರು. ವ್ಯಾಸಂಗ ಮುಗಿಸಿದ  ನಂತರ ಕೆನಡಾಗೆ ತೆರಳಿದ್ದ ಶ್ರೇಯಸ್ ಅಲ್ಲಿಯೂ ಕ್ರಿಕೆಟ್ ಬಿಟ್ಟಿರಲಿಲ್ಲಾ. ಕೆನಡಾಕ್ಕೆ ಕೆಲಸಕ್ಕೆಂದು ಹೋದ ಶ್ರೇಯಸ್ ಅಲ್ಲಿಯೂ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಿದ್ದ. ಹಲವು ವರ್ಷಗಳಿಂದ ಕೆನಡಾ ಟೀಮ್ ಆಟವಾಡಿದ್ದ ಶ್ರೇಯಸ್ ಇದೀಗ ಕೆನಡಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಇದೀಗ ಜೂನ್ 2 ರಿಂದ ಆರಂಭವಾಗಿರುವ  ಟಿ.20 ವಿಶ್ವಕಪ್ ನಲ್ಲಿ ಕೆನಡಾ ಟೀಂನ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆದಿದ್ದು, ಪೋಷಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಇದನ್ನೂ ವೀಕ್ಷಿಸಿ:  Lok Sabha elections 2024: ಬಿಜೆಪಿಗೆ ಎಷ್ಟು ಸ್ಥಾನ..INDIAಗೆ ಎಷ್ಟು ಸ್ಥಾನ..? ಮತಕಟ್ಟೆ ಲೆಕ್ಕಾಚಾರ..!

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
01:51Asia Cup 2025: ಒಂಬತ್ತನೇ ಟ್ರೋಫಿ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!
Read more