KGF 2; ಬಾಕ್ಸ್ ಆಫೀಸ್‌ನಲ್ಲಿ ರಾಕಿ ರಣಾರ್ಭಟ, ರೆಕಾರ್ಡುಗಳು ಧೂಳಿಪಟ

May 2, 2022, 1:45 PM IST

ಕೆಜಿಎಫ್-2 (KGF 2) ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದೆ. ಹಿಂದಿಯಲ್ಲಿ 400 ಕೋಟಿ ರೂ. ಸಮೀಪಕ್ಕೆ ಬಂದಿರುವ ಕೆಜಿಎಫ್-2 ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 16 ದಿನಗಳಲ್ಲಿ ಕೆಜಿಎಫ್-2 ವಿಶ್ವದಾದ್ಯಂತ 1000 ಕೋಟಿ ರೂಪಾಯಿ ಗಳಿಕೆ(KGF 2 crosses Rs 1000 cr) ಮಾಡುವ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಭಾರತದಲ್ಲಿ ಈ ಸಾಧನೆ ಮಾಡಿದ 4ನೇ ಸಿನಿಮಾ ಕೆಜಿಎಫ್-2 ಎನ್ನುವ ಹೆಗ್ಗಳಿಕೆ ಕೂಡ ಗಳಿಸಿದೆ. ಈಗಾಗಲೇ 1000 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಕೆಜಿಎಫ್-2 ಆರ್ಭಟ ಇನ್ನು ಮುಂದುವರೆದಿದೆ.