
ಯಶ್ ಇದೀಗ 120 ಬಹದ್ದೂರ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಫರಾನ್ ಅಖ್ತರ್ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯ ಪೇಜ್ ಅಲ್ಲಿಯೇ ಯಶ್ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಇದೀಗ 120 ಬಹದ್ದೂರ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಫರಾನ್ ಅಖ್ತರ್ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯ ಪೇಜ್ ಅಲ್ಲಿಯೇ ಯಶ್ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಫರ್ಹಾನ್ ಅಖ್ತರ್ ಸೇರಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. 1962ರಲ್ಲಿ ಭಾರತ ಮತ್ತು ಚೀನಾ ಯುದ್ಧದ ಕಥೆಯನ್ನ ಇದು ಹೇಳುತ್ತಿದೆ. ಚೀನಾದ 3000 ಯೋಧರನ್ನ ಭಾರತದ ಕೇವಲ 120 ಸೈನಿಕರು ಮೆಟ್ಟಿ ನಿಂತ ವೀರರ ಕಥೆಯ ಚಿತ್ರ ಇದಾಗಿದೆ.
ಮೈ ನೇಮ್ ಈಸ್ ಕೆಡಿ ಟ್ರೇಲರ್ ಬಿಡುಗಡೆ: 'ಇಂತಿ ನಿಮ್ಮ ಭೈರಾ' ಸಿನಿಮಾ ಮಾಡಿದ್ದ ಚಿತ್ರತಂಡ ಈಗ ಎರಡನೇ ಪ್ರಯತ್ನ ಎನ್ನುವಂತೆ ಮೈ ನೇಮ್ ಈಸ್ ಕೆಡಿ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಟ್ರೇಲರ್ಬಿಡುಗಡೆ ಮಾಡಿದ್ದಾರೆ. ಫಿಲಿಂ ಛೇಂಬರ್ ಮಾಜಿ ಅಧ್ಯಕ್ಷ ಬಾ.ಮ.ಹರೀಶ್, ಮಹಾರಾಣಿ ಕಾಲೇಜು ಉಪಕುಲಪತಿ ಶಿವಶಂಕರಪ್ಪ ಮತ್ತು ನಿರ್ದೇಶಕ ಟಿ.ಶಿ.ವೆಂಕಟೇಶ್ ಟ್ರೈಲರ್ ಬಿಡುಗಡೆ ಮಾಡಿದ್ರು, ವೆಂಕಟೇಶ್.ಡಿ ನಿರ್ಮಾಣ ಮಾಡಿರೋ ಸಿನಿಮಾವನ್ನ ಕೆ.ಜೆ. ಚಿಕ್ಕು ಆಕ್ಷನ್ ಕಟ್ ಹೇಳಿದ್ದಾರೆ. ಆರ್ಯನ್ವೆಂಕಟೇಶ್ ನಾಯಕನಾಗಿ ನಟಿಸಿದ್ದು, ಭವಾನಿ ನಾಯಕಿಯಾಗಿದ್ದಾರೆ. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಗಿರೀಶ್ಜತ್ತಿ, ವಿಶ್ವ, ಯತಿರಾಜ್, ಅರಸು ಮಹಾರಾಜ್, ಸುಪ್ರೀತ್ಕಾಟಿ, ರೋಹಿಣಿ, ನಟಿಸಿದ್ದಾರೆ.
ಮನೆಯ ನಾಯಿ ಹುಟ್ಟುಹಬ್ಬ ಆಚರಿಸಿದ ರಾಧಿಕಾ: ನಟ ಯಶ್ ಹಾಗು ನಟಿ ರಾಧಿಕಾ ಪಂಡಿತ್ ತನ್ನ ಮನೆಯ ಕೋಕೋನ ಹುಟ್ಟುಹಬ್ಬ ಆಚರಿಸಿದ್ದಾರೆ. ತಮ್ಮ ಮನೆಯ ಮುದ್ದಿನ ನಾಯಿಮರಿ ಕೊಕೊ ಗೆ 2ನೇ ವರ್ಷದ ಹುಟ್ಟುಹಬ್ಬ. ಐರಾ, ಐಥರ್ವ್ ಜೊತೆಗೆ ರಾಧಿಕಾ ಪೋಷಕರು ಹಾಗೂ ಸಿಬ್ಬಂದಿ ಈ ಸಂಭ್ರಮಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ರಾಧಿಕಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, "ಜಂಜಾಟದಿಂದ ತುಂಬಿರುವ ಜಗತ್ತಿನಲ್ಲಿ, ಅಚಲವಾದ ವಾತ್ಸಲ್ಯ ಹೇಗಿರುತ್ತದೆ ಎಂಬುದನ್ನು ಅವಳು ನಮಗೆ ನೆನಪಿಸುತ್ತಾಳೆ. ಹುಟ್ಟುಹಬ್ಬದ ಶುಭಾಶಯಗಳು, ಕೊಕೊ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಆ್ಯಕ್ಷನ್, ಡ್ರಾಮಾ 'ಉಗ್ರ ತಾಂಡವ' ಟೀಸರ್ ಬಿಡುಗಡೆ: ಸಮಾಜ ಸೇವಕ, ಉದ್ಯಮಿ ಡಾ ಎನ್. ನರಸಿಂಹಮೂರ್ತಿ ಸುರಭಿ ಫಿಲಂಸ್ ಬ್ಯಾನರ್ ನಲ್ಲಿ 'ಉಗ್ರ ತಾಂಡವ' ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಗೌತಮ ಸೂರ್ಯ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ಚಿರಂತ ನಟಿಸುತ್ತಿದ್ದಾರೆ. ಮಲೆನಾಡ ಸೊಗಡಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಶೂಟಿಂಗ್ ಇನ್ನಷ್ಟೇ ಶುರುವಾಗಬೇಕಾಗಿದೆ. ಕರಾವಳಿಯಲ್ಲಿ ನಡೆಯುವ ರಾಜಕೀಯ, ಮಾಫಿಯಾ ಹಾಗೂ ಜಮೀನ್ದಾರ-ಕಾರ್ಮಿಕರ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ ನರಸಿಂಹಮೂರ್ತಿ, ನಿರ್ದೇಶಕರು ತುಂಬಾ ಟೀಸರ್ ಚೆನ್ನಾಗಿ ಮಾಡಿದ್ದಾರೆ. ಹಾಗಾಗಿ ಸಿನಿಮಾ ಕೂಡ ಚೆನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ನಿಷಿದ್ಧ ಪಾಲಿಸಿದರೆ ಬದುಕು ಸುಖಮಯ: ಹೊಸ ಪ್ರತಿಭೆಗಳ ನಿಷಿದ್ಧ ಚಿತ್ರವು ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ ಆಗಿದೆ. ಸಿ.ಬಿ.ಬೋಪಯ್ಯ ಬಂಡವಾಳ ಹೂಡಿರೋ ಸಿನಿಮಾದಲ್ಲಿ ಸುಸಮಯ ದಿನೇಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ನಾಯಕನಾಗಿ ಅಂಜನ್ತಮ್ಮಯ್ಯ ಹಾಗು ನಾಯಕಿಯಾಗಿ ಶ್ವೇತಾ ಪೂಜಾರಿ ಮತ್ತು ಶೃತಿ ರಮೇಶ್ ನಟಿಸಿದ್ದಾರೆ.